Share this news

ಕಾರ್ಕಳ:ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಶಿಲಾಮಯ ಹಾಗೂ ತಾಮ್ರಭೂಷಿತ ಗರ್ಭಗುಡಿಗಳಲ್ಲಿ
ಶ್ರೀ ಬ್ರಹ್ಮಲಿಂಗೇಶ್ವರ ಮತ್ತು ಸಪರಿವಾರ ವೀರಭದ್ರ ದೇವರ ಬಿಂಬಗಳ ಪುನರ್ ಪ್ರತಿಷ್ಠಾ ಧಾರ್ಮಿಕ ಕಾರ್ಯಗಳು ಮೇ 1 ರಂದು ಜರುಗಿತು.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಷಡಂಗ ಬಿ. ಲಕ್ಷ್ಮೀನಾರಾಯಣ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಷಡಂಗ ಬಿ. ಗುರುರಾಜ ತಂತ್ರಿಗಳ ಸಹಯೋಗದೊಂದಿಗೆ ಪ್ರಧಾನ ಅರ್ಚಕರಾದ ಗುರುರಾಜ್ ಮಂಜಿತ್ತಾಯ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.
ಬುಧವಾರ ಬೆಳಗ್ಗೆ ನಾಗಶಿಲಾ ಪ್ರತಿಷ್ಠೆ, ಪ್ರಾಯಶ್ಚಿತ್ತ ಹೋಮ ಪೂರ್ವಕ ಆಶ್ಲೇಷಾ ಬಲಿ., ವೀರಭದ್ರ ದೇವರ ಪ್ರತಿಷ್ಠೆ, ಗಣಪತಿ ಮತ್ತು ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೈವ ದೇವರುಗಳ ಪ್ರತಿಷ್ಠೆ ನಡೆಯಿತು.

 

ನಿತ್ಯ ನೈಮಿತ್ತಿಕ ವಿಧಿ ವಿಧಾನಗಳ ಸಂಕಲ್ಪ, ಅನ್ನಸಂತರ್ಪಣೆ, ಪರಿವಾರ ದೈವಗಳಿಗೆ ಪ್ರತ್ಯೇಕ ನವಕ ಪ್ರಧಾನ ಹೋಮಗಳು, ಬಲಿ ಶಿಲಾ ಪ್ರತಿಷ್ಠೆ- ಗಣಪತಿ ಮತ್ತು ಅನ್ನಪೂರ್ಣೇಶ್ವರಿ ದೇವರುಗಳಿಗೆ ದ್ವಿಪ್ರತಿ 108 ಕಲಶ ಅಧಿವಾಸ ಹೋಮಗಳು ಮಂಟಪ ಸಂಸ್ಕಾರ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೊತ್ಸವ ಸಮಿತಿ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಪ್ರಧಾನ ಅರ್ಚಕ ವೇದಮೂರ್ತಿ ಗುರುರಾಜ ಮಂಜಿತ್ತಾಯ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ,
ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಮಾಗಣೆ ಮುಖ್ಯಸ್ಥರು ಹಾಗೂ ಗ್ರಾಮಸ್ಥರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಗೀತ ಕಾರ್ಯಕ್ರಮ, ರಂಗ ಕಲಾವಿದರು ರಂಗನಪಲ್ಕೆ
ಅಭಿನಯದ ಪಿರ ಬನ್ನಗ ನಾಟಕ ಪ್ರದರ್ಶನಗೊಂಡಿತ್ತು.

 

 

 

 

                        

                          

Leave a Reply

Your email address will not be published. Required fields are marked *