ಕಾಪು : ಹೆಜಮಾಡಿಯ ನಿವಾಸಿ ಕಾಂಗ್ರೆಸ್ ಮುಖಂಡ ಗುಲಾಂ ಮೊಹಮ್ಮದ್ ಮೇಲೆ ದಾಳಿ ನಡೆಸಲು ಕಾರೊಂದರಲ್ಲಿ ಬಂದ ತಂಡದ ಪ್ರಯತ್ನ ವಿಫಲಗೊಂಡ ಘಟನೆ ಕಟಪಾಡಿ ಬಳಿ ನಡೆದಿದೆ.
ಮಣಿಪಾಲದಿಂದ ತನ್ನ ನಿವಾಸಕ್ಕೆ ಫಾರ್ಚೂನರ್ ಕಾರಿನಲ್ಲಿ ತನ್ನವರಾದ ಆಸೀಫ್ ಹಾಗೂ ಅಬೂಬಕ್ಕರ್ ರೊಂದಿಗೆ ಹೊರಟು ಉದ್ಯಾವರ ಸೇತುವೆ ಬಳಿ ಬರುತ್ತಿದಂತೆ ತನ್ನ ಕಾರನ್ನು ಯಾರೋ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಗಮನಿಸಿ ಕಾರಿನ ವೇಗ ಹೆಚ್ಚಿಸಿದರೂ ಅದನ್ನು ಬೆನ್ನಟ್ಟಿ ಡಿಕ್ಕಿ ಮಾಡಲು ಯತ್ನಿಸಿದ್ದು, ಕಟಪಾಡಿ ಪೇಟೆ ಜಂಕ್ಷನ್ ನಲ್ಲಿ ವಾಹನ ದಟ್ಟಣೆಯಿಂದ ಕಾರನ್ನು ನಿಲ್ಲಿಸಿದಾಗ ಕೊಂಚ ಮುಂದೆ ಹೋಗಿ ಬೆನ್ನಟ್ಟಿ ಬಂದ ಕಾರು ನಿಂತಿದ್ದು, ರಸ್ತೆ ಕ್ಲಿಯರ್ ಆಗುತ್ತಿದಂತೆ ಇವರ ಚಾಲಕ ಮುಂದೆ ಹೋಗುವಂತೆ ನಟಿಸಿ ಶಿರ್ವ ರಸ್ತೆಯಾಗಿ ಕಾಪು ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾರೆ.
ಹೆದ್ದಾರಿ ಸಿಸಿ ಕ್ಯಾಮರಾಗಳ ಮೂಲಕ ಕಾರಿನ ಚಲನ-ವಲನ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಎಂ ಎಸ್ ಸೈಯದ್ ನಿಝಾಮುದ್ದೀನ್ ಕಾಂಗ್ರೆಸ್ ಮುಖಂಡರಾದ ಗುಲಾo ಮಹಮ್ಮದ್ ಕೊಲೆಗೆ ಸಂಚು ರೂಪಿಸಿರುವ ವಿಚಾರ ಖಂಡನೀಯ. ಪ್ರಜ್ಞಾವಂತರು ಹಾಗೂ ಬುದ್ಧಿವಂತರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಜಿಲ್ಲೆಗೆ ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ ಇಲಾಖೆ ಯಾವ ಒತ್ತಡಕ್ಕೂ ಮಣಿಯದೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುತ್ತಾರೆ.
























`
