Share this news

ಕಾರ್ಕಳ: ಜೈಲಿಗೆ ಹೋಗಿ ಮಗನೊಂದಿಗೆ ಮಾತನಾಡಿಸಿಕೊಂಡು ಬಂದ ತಾಯಿಯೋರ್ವಳು ಅದೇ ಚಿಂತೆಯಿಂದ ಮನನೊಂದು ಮನೆಯ ಹತ್ತಿರದಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಪ್ರೇಮ ಮೃತ ದುರ್ದೈವಿ.

ಸೆ.11ರಂದು ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಮಗನ ಬಂಧನದಿಂದ ಮನನೊಂದು ಈ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪ್ರೇಮ ಅವರ ಮಗ ಸುಮಂತ್ ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಒಂದೂವರೆ ತಿಂಗಳ ಹಿಂದೆ ವಾರಂಟ್‌ನಲ್ಲಿ ದಸ್ತಗಿರಿ ಮಾಡಿದ್ದರು.

ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಮಗನನ್ನು ಸೆ.11ರಂದು ತಾಯಿ ಪ್ರೇಮ ಜೈಲಿಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದರು. ನಂತರ ಇದೇ ಚಿಂತೆಯಿಂದ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

    

                       in 

                          

                        

                       

Leave a Reply

Your email address will not be published. Required fields are marked *