ಕಾರ್ಕಳ:ಜಾಂಡೀಸ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಎರ್ಲಪಾಡಿಯ ಪ್ರಶಾಂತ (43) ಮೃತಪಟ್ಟವರು. ಪ್ರಶಾಂತ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿದ್ದರೂ ವಿಪರೀತ ಕುಡಿತದ ಚಟದಿಂದ ಪತ್ನಿಯೊಂದಿಗೆ ಜಗಳವಾಡಿ 3 ವರ್ಷಗಳಿಂದ ಅಣ್ಣನ ಮನೆಯಲ್ಲಿದ್ದರು.
ಆಗಸ್ಟ್ 17 ರಂದು ಮದ್ಯಾಹ್ನ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡು ನಂತರ ಜಾಂಡೀಸ್ ಕಾಯಿಲೆ ಬಂದಿದ್ದು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಶಾಂತ್ ಚಿಕಿತ್ಸೆಗೆ ಸ್ಪಂದಿಸದೆ ಆ.19 ರಂದು ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























