ಕಾರ್ಕಳ: ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಉಮೇಶ್ (62) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ವಿವಾಹವಾಗಿ ಮುಂಬೈನಲ್ಲಿ ವಾಸವಾಗಿದ್ದವರು ಎಂಟು ವರ್ಷದ ಹಿಂದೆ ತನ್ನ ಹೆಂಡತಿ ಮಗುವನ್ನು ಮುಂಬೈಯಲ್ಲಿ ಬಿಟ್ಟು ಊರಿಗೆ ಬಂದು ವಾಸವಾಗಿದ್ದು ವಿಪರೀತ ಮದ್ಯಪಾನದ ಚಟ ಹೊಂದಿದ್ದರು.
ಇವರ ಪತ್ನಿ ಮತ್ತು ಪುತ್ರ ಮುಂಬೈಯಲ್ಲಿ ವಾಸವಿದ್ದು ಉಮೇಶ್ ರೊಂದಿಗೆ ಮಾತುಕತೆ ಇರಲಿಲ್ಲ. ಉಮೇಶ್ ತನ್ನ ಪತ್ನಿ ಮತ್ತು ಪುತ್ರ ಊರಿಗೆ ಬಾರದೇ ಮತ್ತು ತನ್ನೊಂದಿಗೆ ಮಾತನಾಡದೆ ಇರುವ ಕಾರಣ ಮನನೊಂದು ಸೋಮವಾರ ಸಂಜೆ ತಾನು ವಾಸವಿದ್ದ ಮನೆಯ ಬಳಿ ಇರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














`
