ಕಾರ್ಕಳ : ರಾಮಕ್ಷತ್ರಿಯ ಸಂಘ ಕಾರ್ಕಳ ಇವರ ವಾರ್ಷಿಕೋತ್ಸವವು ಶ್ರೀ ರಾಮ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಸಹಯೋಗದೊಂದಿಗೆ ಶ್ರೀ ರಾಮ ಸಭಾಭವನ ಬಂಡಿಮಠ ಕಾರ್ಕಳದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಗುರುಪ್ರಸಾದ್ ರಾವ್ ಅಜೆಕಾರು ವಹಿಸಿ ಮಾತನಾಡಿ, ಸಂಬಂಧ ಗಳನ್ನು ಬೆಸೆಯುವ ಕಾರ್ಯಕ್ರಮ ವಾರ್ಷಿಕೋತ್ಸವಾಗಿದ್ದು ಸಮಾಜದ ಗೌರವ ಹೆಚ್ಚಿಸುವ ಜತೆಗೆ ಧರ್ಮ ಉಳಿಸುವ ಕೆಲಸ ಆಗಬೇಕು. ರಾಮಕ್ಷತ್ರಿಯ ಸಮಾಜದ ಯುವ ಪೀಳಿಗೆ ಶಿಕ್ಷಣದ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ನಿವೃತ ಪ್ರಬಂಧಕರಾದ ಎ. ನಾರಾಯಣ ಸೆರ್ವೇಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೋರಾಟದ ಮನೋಭಾವ ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಗುಪ್ತವಾರ್ತೆಯ ಡಿವೈಎಸ್ ಪಿ ಕೆ.ಶ್ರೀಕಾಂತ್ ಭಾಗವಹಿಸಿ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಸಂಘವು ದತ್ತಕ್ಕೆ ಪಡೆದು ಗುಣಮಟ್ಟದ ಶಿಕ್ಷಣ ನೀಡುವ ವ್ಯವಸ್ಥೆಯಾಗಬೇಕು. ಆಗ ಆ ಮಗು ಸಮಾಜದ ಆಸ್ತಿಯಾಗಲು ಸಾಧ್ಯ ಎಂದರು.
ನಿವೃತ ಎ ಎಸ್ ಇ ಸದಾಶಿವ ರಾವ್ ಕೆ., ಮಂಗಳೂರು ರಾಮಕ್ಷತ್ರೀಯ ಸಂಘದ ಮಾಜಿ ಅಧ್ಯಕ್ಷ ಉದ್ಯಮಿ ಕೆ. ದಿನೇಶ್ ರಾವ್, ನೀರೆ ಗ್ರಾಮ ಪಂಚಾಯಿತ್ ಮಾಜಿ ಉಪಾಧ್ಯಕ್ಷೆ ಶಕುಂತಳಾ ಎಸ್ ರಾವ್, ಸಾಫ್ಟ್ವೇರ್ ಇಂಜಿನಿಯರ್ ಆದರ್ಶ ವಿ. ರಾವ್, ರಾಮಕ್ಷತ್ರೀಯ ಸಂಘ ಕಾರ್ಕಳ ಇದರ ಗೌರವಾಧ್ಯಕ್ಷರಾದ ಪಾರ್ಥಸಾರಥಿ, ಪ್ರಸನ್ನ ಕೆ. ಬಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಕೇಶ್ ಎನ್ ರಾವ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ಸುಧೀರ್ ಉಪ್ಪೂರು, ಕಂಬಳ ಕೋಣದ ಉಜಮಾನರಾದ ಉಮೇಶ್ ರಾವ್ ಹಿತ್ಲುಮನೆ ಅಂಡಾರು, ಶಿರ್ಲಾಲು ಕುಕ್ಕುಜೆ ತ್ರಿಶಾ ಸಂಜೀವ ಸೇರ್ವೆಗಾರ್ ರನ್ನು ಸಮ್ಮಾನಿಸಿ ಗೌರವಿಸಲಾಯಿತು. 2023-24ನೇ ಸಾಲಿನ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ರಾಮಕ್ಷತೀಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಅಂಬಾಪ್ರಸಾದ್ ಸ್ವಾಗತಿಸಿದರು. ಕೋಶಾಧಿಕಾರಿ ಪ್ರವೀಣ್ ಕೆ ವರದಿ ಮಂಡಿಸಿದರು. ನಂದಕುಮಾರ್, ಕಿಶೋರ್‌ಕುಮಾರ್ ಜೋಡುರಸ್ತೆ ಗೌರವಿಸಿದರು. ಸಾಂಸ್ಕತಿಕ ಕಾರ್ಯದರ್ಶಿ ಸುಕೇಶ್ ರಾವ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಮ್ಮಾನಿತರ ಪಟ್ಟಿಯನ್ನು ಬಾಲಕೃಷ್ಣ ರಾವ್, ಜ್ಯೋತಿ ವಾಚಿಸಿದರು. ಸಮ್ಮಾನಿತರು ಪರಿಚಯವನ್ನು ಮಾನ್ಯ ರವ್, ಸಂಧ್ಯಾ ವಾಚಿಸಿದರು.
ಅಪಘಾತಕ್ಕಿಡಾಗಿ ಚಿಕ್ಸಿತ್ಸೆ ಪಡೆಯುತ್ತಿರುವ ಅಂಡಾರು ಹರೀಶ್ ರಾವ್ ಅವರಿಗೆ ಆರೋಗ್ಯ ಸಹಾಯಧನ ವಿತರಿಸಲಾಯಿತು.
ಶ್ರೀ ಲಕ್ಷ್ಮೀ ಪ್ರಭಾಕರ ರಾವ್ ಅಂಡಾರು ಪ್ರತಿಭಾನ್ವಿತರ ಪಟ್ಟಿ ವಾಚನ ಮಾಡಿದರು. ಸಂಘಟನಾ ಕಾರ್ಯದರ್ಶಿ ಮಹೇಶ್ ರಾವ್ ವಂದಿಸಿದರು. ಶಿಕ್ಷಕ ಸಂಜಯ್ ಕುಮಾರ್ ಹಾಗೂ ಸಾವಿತ್ತಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಸಭಾಕಾರ್ಯಕ್ರಮದ ಬಳಿಕ ರಾಮಕ್ಷತ್ರಿಯ ಸಮಾಜ ಬಾಂಧವರಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
`