Share this news

ಕಾರ್ಕಳ : ಕಾರ್ಕಳ ತಾಲೂಕಿನ ಕಸಬಾ ಗ್ರಾಮದಲ್ಲಿ ಬಾಗಿಲಿನ ಬೀಗ ಮುರಿದು ಕಳವಿಗೆ ಯತ್ನ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.

ಕಸಬಾ ದ ಗಣೇಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರ ಹಾಡಹಗಲೇ ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ ಯಾರೋ ಕಳ್ಳರು ಬಾಗಿಲಿಗೆ ಹಾಕಿದ ಚಿಲಕವನ್ನು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಮನೆಯ ಹಾಲ್‌ನಲ್ಲಿದ್ದ ಮತ್ತು ಬೆಡ್‌ರೂಮ್‌ನಲ್ಲಿದ್ದ ಕಪಾಟ್‌ಗಳನ್ನು ತೆರೆದು ಅದರೊಳಗೆ ಇದ್ದ ಬಟ್ಟೆಗಳನ್ನು ಹರಡಿ ಕಳವಿಗೆ ಯತ್ನಿಸಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *