ಕಾರ್ಕಳ:ವಿಪರೀತ ಸಾಲಬಾಧೆಯಿಂದ ಮನನೊಂದ ಪತಿ ತನ್ನ ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಏ 9 ರಂದು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿ ಸಂಭವಿಸಿದೆ.
ಕುಕ್ಕುಂದೂರಿನ ನಕ್ರೆ ನಿವಾಸಿ ಪ್ರಭಾಕರ ಆಚಾರ್ಯ ಹಾಗೂ ಪತ್ನಿ ಹರಿಣಾಕ್ಷಿ ಹಾಗೂ ಇಬ್ಬರು ಮಕ್ಕಳು ವಿಷ ಸೇವಿಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಭಾಕರ್ ಆಚಾರ್ಯ ಇತ್ತೀಚೆಗೆ ಮನೆ ಕಟ್ಟಿಸಿದ ಪರಿಣಾಮ ವಿಪರೀತ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲಗಾರರು ಪದೇಪದೇ ಹಣ ನೀಡುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಇತ್ತ ತಾನು ಮಾಡಿದ ತೀರಿಸಲು ಸಾಧ್ಯವಾಗದಿರುವ ಹಿನ್ನೆಲೆ ಹೆಂಡತಿ ಮಕ್ಕಳೊಂದಿಗೆ ಯುಗಾದಿ ದಿನದಂದು ಸಂಜೆ ಜ್ಯೂಸ್ ಬಾಟಲಿಯಲ್ಲಿ ವಿಷ ಬೆರಸಿ ಮಕ್ಕಳಿಗೆ ಹಾಗೂ ಪತ್ನಿ ಹರಿಣಾಕ್ಷಿಗೆ ನೀಡಿ ಬಳಿಕ ತಾನೂ ಕೂಡ ವಿಷಮಿಶ್ರಿತ ಜ್ಯೂಸ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವನೆಯ ಬಳಿಕ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ