
ಕಾರ್ಕಳ,ಜ.01: ಕಾರ್ಕಳ ವಿದ್ಯಾರ್ಥಿ ಬಂಧುತ್ವ ವೇದಿಕೆ ಆಶ್ರಯದಲ್ಲಿ ವಿಜೇತ ವಿಶೇಷ ಶಾಲೆಯಲ್ಲಿ ಸೌಹಾರ್ದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ಅತ್ತೂರು ಚರ್ಚ ಆಡಳಿತ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕ್ರಿಸ್ಮಸ್ ಹಬ್ಬವನ್ನು ಜಗತ್ತಿನಾದ್ಯಂತ ಶಾಂತಿಯ ಸಂದೇಶವನ್ನು ಸಾರಲು ಸಂಭ್ರಮದಿಂದ ಅಚರಿಸಲಾಗುತ್ತದೆ. ಸಂತ ಕ್ಲಾಸ್ ಆಗಮನದಿಂದ ಸಂಭ್ರಮ ನೆಲಸಿ ನೋವು ದುಃಖಗಳು ಅಂತ್ಯವಾಗಲಿ ಎಂಬ ಸಂದೇಶವಿದೆ ಎಂದರು.
ಉದ್ಯಮಿ ಬ್ರಿಯಾನ್ ಪಾಯಸ್ ಮಾತನಾಡಿ, ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಸೌಹಾರ್ದ ಕ್ರಿಸ್ ಮಸ್ ಆಚರಿಸುವುದರ ಮೂಲಕ ವಿದ್ಯಾರ್ಥಿ ಬಂಧುತ್ವ ವೇದಿಕೆಯವರು ಮಾನವೀಯತೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿ ಸದಸ್ಯ ರೊನಾಲ್ಡ್ ಮನೋಹರ್ ಕರ್ಕಡ ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಎನ್. ಸುಬೀತ್ ಕುಮಾರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸುರತ್ಕಲ್ ವಿಶೇಷ ಶಾಲೆಯ ಮುಖ್ಯೋಪಾದ್ಯಾಯಿನಿ ಸೌಮ್ಯಾ ದೇವಾಡಿಗ, ವಿಭಾಗಿಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಗ್ಯಾರಂಟಿ ಅಧ್ಯಕ್ಷ ಅಜಿತ್ ಹೆಗ್ಡೆ, KMF ನಿರ್ದೇಶಕ ಸುಧಾಕರ ಶೆಟ್ಟಿ, ಹಿರಿಯವರಾದ ಜಾರ್ಜ್ ಕಾಸ್ಟಲಿನೋ ನಕ್ರೆ, ವಿವೇಕಾನಂದ ಶೆಣೈ, , ಯುವ ಅಧ್ಯಕ್ಷರಾದ ಸೂರಜ್ ಶೆಟ್ಟಿ, ಮಲ್ಲಿಕ್ ಅತ್ತೂರು,ಪ್ರದೀಪ್ ಬೆಲಾಡಿ ಸಂತೋಷ್ ದೇವಾಡಿಗ ಹಾಗೂ ಎನ್.ಎಸ್.ಯು.ಐ ಅಧ್ಯಕ್ಷ ಉದಿತ್ ಶೆಟ್ಟಿಗಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನು ಭಾಸ್ಕರ್ ಹಾಗೂ ಶೋಭಾ ಪ್ರಸಾದ್, ಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ನಿತೀಶ್ ಶೆಟ್ಟಿಗಾರ್, ಸದಸ್ಯ ಸಂಸ್ಕೃತ್, ಕೆ. ಪಿ. ಅಭಿಜ್ಞಾನ್, ಯುವಾನ್ಸ್ ಡಿಸೋಜ ಕಾರ್ಯಕ್ರಮದಲ್ಲಿ ಹಾಜರಿದ್ದರು.ವಿಜೇತ ವಿಶೇಷ ಶಾಲೆಯ ಸ್ಥಾಪಕ ಅಧ್ಯಕ್ಷೆ ಡಾ. ಕಾಂತಿ ಹರೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.


.
.
