Share this news

ಕಾರ್ಕಳ: ಕಾನೂನು ಸೇವೆಗಳ ಸಮಿತಿ, ಕಾರ್ಕಳ ತಾಲೂಕು ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಸ್ವಚ್ಛತಾ ಜಾಥ ಇಂದು ಅಯ್ಯಪ್ಪ ನಗರ ಆಟೋ ನಿಲ್ದಾಣದಿಂದ ವಿಜೇತ ವಿಶೇಷ ಶಾಲೆಯವರೆಗೆ ಬೆಳಿಗೆ 08 ಗಂಟೆಯಿAದ 9 ಗಂಟೆಯವರೆಗೆ ನಡೆಯಿತು.

ಸ್ವಚ್ಛತಾ ಅಭಿಯಾನದಲ್ಲಿ ಕಾರ್ಕಳ ಹಿರಿಯ ನ್ಯಾಯಧೀಶೆ ಶರ್ಮಿಳಾ ಸಿ.ಎಸ್ ಮಾತನಾಡಿ, ಕಳೆದ 5 ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ಸ್ವಚ್ಛತಾ ಕ್ರಾಂತಿ ಮೂಡಿಸಿದ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಕಾರ್ಯವನ್ನು ಶ್ಲಾಘಿಸಿ ಎಲ್ಲರೂ ಇವರಿಂದ ಪ್ರೇರಿತರಾಗಬೇಕೆಂದು ಕರೆ ನೀಡಿದರು.

ಅಭಿಯಾನದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಕೋಮಲ ಆರ್. ಸಿ, ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಅಬುತಾಹೀರ್, ವಕೀಲರ ಸಂಘದ ಉಪಾದ್ಯಕ್ಷರಾದ ಕೆ ಹರೀಶ್ ಅಧಿಕಾರಿ, ನ್ಯಾಯಾಲಯದ ಸಿಬ್ಬಂದಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.

                       in 

Leave a Reply

Your email address will not be published. Required fields are marked *