ಕಾರ್ಕಳ: ಹಿಂದುಳಿದ ಸಣ್ಣ ಸಮುದಾಯಗಳಿಗೆ ಆದ್ಯತೆ, ನ್ಯಾಯ ದೊರಕಬೇಕು, ಸರ್ವ ಕ್ಷೇತ್ರದಲ್ಲಿ ಅವಕಾಶ ಸಿಗಬೇಕು ಎಂದು ಅವಿರತ ಶ್ರಮಿಸಿದರು ದೇವರಾಜ ಅರಸುರವರು. ಸಣ್ಣ ಸಮುದಾಯಗಳನು ಮುಖ್ಯವಾಹಿನಿ ತರುವಲ್ಲಿ ಅವರ ಶ್ರಮ ಅದ್ವಿತೀಯ, ಅಂತರಂಗದ ಕಳಕಳಿಯಿಂದ ಜನಕಲ್ಯಾಣಕ್ಕಾಗಿ ಅಡಿಪಾಯ ಹಾಕಿದರು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಜಿ.ಪಂ., ಉಡುಪಿ, ತಾಲೂಕು ಪಂಚಾಯತ್, ತಾಲೂಕು ಆಡಳಿತ , ಪುರಸಭೆ ಕಾರ್ಕಳ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಕಳ ಇವುಗಳ ಆಶ್ರಯದಲ್ಲಿ ಡಿ.ದೇವರಾಜ ಅರಸು ಭವನದಲ್ಲಿ ನಡೆದ ದಿ| ಡಿ. ದೇವರಾಜ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಿ| ಡಿ. ದೇವರಾಜ ಅರಸುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಕಾರ್ಕಳ ಪ್ರಭಾರ ತಹಶೀಲ್ದಾರ್ ಪ್ರತಿಭಾರವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜು ಅರಸುರವರ ತತ್ವಾದರ್ಶ, ಕೊಡುಗೆಗಳ ಕುರಿತು ಮಾತನಾಡಿದರು.
ಹೆಬ್ರಿ ಸಮಾಜ ಕಲ್ಯಾಣ ಇಲಾಖೆ ನಿಲಯ ಮೇಲ್ಪಿಚಾರಕಿ ಜಯಂತಿ ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ ಪೊಲೀಸ್ ಇಲಾಖೆ ಪಿಎಸ್ ಐ ಸುಂದರ, ತಾ. ಪಂ. ವ್ಯವಸ್ಥಾಪಕ ಹರೀಶ್ ಕೆ.ಬಿ. ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅನಂತ್ ಎನ್. ಭಟ್ಕಳ್ ಸ್ವಾಗತಿಸಿದರು. ಕನ್ನಡ ಮಾಧ್ಯಮದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳನ್ನು ಸಮ್ಮಾನಿಸಿ, ಗೌರವಿಸಲಾಯಿತು. ಮೆಟ್ರಿಕ್ ಆನಂತರದ ಬಾಲಕಿಯರ ನಿಲಯ ಮೇಲ್ಪಿಚಾರಕಿ ಮೇಘಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.
`