Share this news

ಕಾರ್ಕಳ: ಬದುಕು ಎಂಬುದು ಹಚ್ಚಿದ ದೀಪ. ಶುದ್ಧ ಚಾರಿತ್ರ‍್ಯ ಸನ್ನಡತೆಯೊಂದಿಗೆ ಬದುಕು ಸುಂದರವಾಗಿ ಮಾಡಿಕೊಳ್ಳಬೇಕು. ನಾವು ಪಡೆದ ಶಿಕ್ಷಣಕ್ಕೆ ಅರ್ಥವಿದೆ ಎಂದರೆ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಕುಂಬಾರ ಮಡಿಕೆ ಮಾಡುವಾಗ ಅದರ ಹೊರಗೆ ಒಂದು ಕೈಯಿಂದ ಸರಿಯಾಗಿ ಪೆಟ್ಟು ಕೊಟ್ಟು ತಟ್ಟುತ್ತಾನೆ. ಅದೇ ಸಮಯದಲ್ಲಿ ಇನ್ನೊಂದು ಕೈಯಲ್ಲಿ ಆದರಿಸುತ್ತಾನೆ. ಅದು ಯಾರಿಗೂ ತಿಳಿಯುವುದಿಲ್ಲ. ಆ ರೀತಿಯಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯವಾಗಬೇಕು. ನಾವು ಶಿಕ್ಷಣ ಕೊಟ್ಟಂತಹ ವಿದ್ಯಾರ್ಥಿಗಳು ಅವರ ಜೀವನದಲ್ಲಿ ಹಾಗೂ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆದು ಉನ್ನತ ಹುದ್ದೆಯ ಅಲಂಕರಿಸಬೇಕು. ಮುಂದೊAದು ದಿನ ಅವರನ್ನು ಭೇಟಿಯಾಗಲು ಅವರಿಂದ ನಾವು ಅನುಮತಿಯನ್ನು ಪಡೆದುಕೊಳ್ಳುವಂತಾಗಬೇಕು. ಆ ರೀತಿಯಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆದಾಗ, ಒಬ್ಬ ಶಿಕ್ಷಕನಿಂದ ಶಿಕ್ಷಣ ಪಡೆದ ಯಾವುದೇ ವಿದ್ಯಾರ್ಥಿಗಳನ್ನು ಕಂಡಾಗ ನಮಗೆ ಹೆಮ್ಮೆ ಎನಿಸಬೇಕು ಎಂದು ಅಜೆಕಾರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಸುಧಾಕರ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು.

ಅವರು ಕಾರ್ಕಳದ ಪ್ರತಿಷ್ಠಿತ ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸುಧೀರ್ಘವಾಗಿ 26 ವರ್ಷಗಳ ಕಾಲ ಕಾರ್ಯನಿರ್ವಹಿಸಿ ವೃತ್ತಿಯಿಂದ ನಿವೃತ್ತಿ ಪಡೆದ ರಾಮದಾಸ್ ಪ್ರಭು ಅವರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಮದಾಸ್ ಪ್ರಭು ಅವರ ಜೊತೆ ವಿದ್ಯಾರ್ಥಿ ದೆಸೆಯಲ್ಲಿ ಸಹಪಾಠಿಯಾಗಿ, ಶಿಕ್ಷಣವನ್ನು ಕಲಿತಿರುವಂತ ಸಂದರ್ಭದಲ್ಲಿ ಅವರ ಬಾಲ್ಯದ ಘಟನೆಗಳನ್ನೆಲ್ಲ ಮೇಲುಕು ಹಾಕಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾರ್ಕಳ ಶ್ರೀ ವೆಂಕಟರಮಣ ದೇವಳದ ಒಂದನೇ ಆಡಳಿತ ಮೊಕ್ತೇಸರಾದ ಜಯರಾಮ ಪ್ರಭು ವಹಿಸಿದ್ದರು.
ವೃತ್ತಿಯಿಂದ ನಿವೃತ್ತಿಯಾಗಿರುವ ಪ್ರಾಂಶುಪಾಲರಾದ ರಾಮದಾಸ್ ಪ್ರಭು ಅವರಿಗೆ ಮೈಸೂರು ಪೇಟ, ಚಿನ್ನದ ಉಂಗುರ ತೊಡಿಸುವ ಮೂಲಕ ಸನ್ಮಾನಿಸಲಾಯಿತು.
ಪದವಿಪೂರ್ವ ವಿಭಾಗದ ಉಪನ್ಯಾಸಕರಾದ ಪ್ರಭಾತ್ ರಂಜನ್ ಹಾಗೂ ಪದ್ಮಪ್ರಭ ಇಂದ್ರ, ಇತರ ಉಪನ್ಯಾಸಕ ವರ್ಗದವರು ಬ್ರು ಕಾಫಿ ಹುಡಿಯಿಂದ ವಿಶೇಷವಾಗಿ ತಯಾರಿಸಿದ ರಾಮದಾಸ್ ಪ್ರಭು ಹಾಗೂ ಶ್ರೀಮತಿ ರೇಷ್ಮಾ ದಂಪತಿಗಳ ವಿಶೇಷ ಭಾವಚಿತ್ರವನ್ನು ಉಡುಗೊರೆಯಾಗಿ ನೀಡುವುದರ ಮೂಲಕ ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನದ ಜೊತೆಗೆ ಪೂರ್ವ ವಿದ್ಯಾರ್ಥಿ ಸಂಘದ ಸದಸ್ಯರು ಅರಿಸಿನ ಕುಂಕುಮದ ಬೆಳ್ಳಿಯ ತಟ್ಟೆ ನೀಡಿದರು. ಎಸ್ ವಿ ಟಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ನಿವೃತ್ತ ಉಪನ್ಯಾಸಕ ವರ್ಗದವರು, ಹಾಗೂ ವಿದ್ಯಾರ್ಥಿಗಳು ಪ್ರೀತಿಯ ನೆನಪಿನ ದ್ಯೋತಕವಾಗಿ ವಿಶೇಷ ಉಡುಗೊರೆಗಳನ್ನು ನೀಡಿ ಸನ್ಮಾನಿಸಿರುವುದು ವಿಶೇಷವಾಗಿತ್ತು.

ನಿವೃತ್ತ ಪ್ರಾಂಶುಪಾಲರಾದ ರಾಮದಾಸ್ ಪ್ರಭು ಅವರು ಸಂಸ್ಥೆಗೆ ಸೇರಿದ ಸಂದರ್ಭದ ಅನುಭವಗಳನ್ನು ಹಂಚಿಕೊAಡು ಆಡಳಿತ ಮಂಡಳಿಯ, ಉಪನ್ಯಾಸಕ ವರ್ಗದವರ ,ಉಪನ್ಯಾಸಕೇತರ ವರ್ಗದವರ ಸಹಕಾರವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿಗಳ ದೇಣಿಗೆಯನ್ನು ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಎಸ್‌ವಿ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಕಮಲಾಕ್ಷ ಕಾಮತ್, ಕೋಶಾಧ್ಯಕ್ಷರಾದ ಐ ರವೀಂದ್ರನಾಥ ಪೈ, ಕಾರ್ಯದರ್ಶಿ ಕೆ.ಪಿ. ಶೆಣೈ, ಎಸ್ ವಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಉಷಾ ನಾಯಕ್, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಮಾಲಿನಿ ಕೆ, ಬಂಡಿವಡ್ಡರ್, ಪೂರ್ವ ವಿದ್ಯಾರ್ಥಿ ಸಂಘ ಗೌರವ ಅಧ್ಯಕ್ಷೆ ಉಷಾ ಜೆ ಶೆಣೈ, ಅಧ್ಯಕ್ಷೆ ಮಾಲತಿ ಎಂ ವಸಂತರಾಜ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಭಾಷಾ ಉಪನ್ಯಾಸಕರಾದ ಪದ್ಮಪ್ರಭ ಇಂದ್ರ ಸನ್ಮಾನ ಪತ್ರವನ್ನು ವಾಚಿಸಿದರು. ದೇವದಾಸ್ ಕೆರೆಮನೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು.
ನೂತನ ಪ್ರಾಂಶುಪಾಲರಾದ ನೇಮಿರಾಜ್ ಶೆಟ್ಟಿ ಸ್ವಾಗತಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಮಂಗಲ ಪ್ರಭು ವಂದಿಸಿದರು. ಪ್ರೌಢಶಾಲಾ ವಿಭಾಗದ ಆಂಗ್ಲ ಭಾಷಾ ಶಿಕ್ಷಕರಾದ ಸುನಿಲ್ ಕುಮಾರ್ ಶೆಟ್ಟಿ ನಿರೂಪಿಸಿದರು.

                        

                          

                        

                          

 

`

Leave a Reply

Your email address will not be published. Required fields are marked *