ಕಾರ್ಕಳ: ಮದುವೆಯ ಮದರಂಗಿ ಶಾಸ್ತçದಲ್ಲಿ ಯುವಕರಿಬ್ಬರು ಹೊಡೆದಾಡಿದ ಪ್ರಕರಣಕ್ಕೆ ಕುರಿತ ಪ್ರಕರಣದಲ್ಲಿ ಪ್ರಶ್ನಿಸಲು ಹೋದ ವ್ಯಕ್ತಿಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿ ನಡೆದಿದೆ.
ಏ 22ರಂದು ಮಹೆಂದಿ ಕಾರ್ಯಕ್ರಮದಲ್ಲಿ ಆಶ್ಲೇಷ್ ಹಾಗೂ ಅಮಿತ್ ಎಂಬ ಯುವಕರ ನಡುವೆ ಸಣ್ಣ ಜಗಳವಾಗಿ ಬಳಿಕ ಆಶ್ಲೇಷ್ ಅಮಿತ್ ಗೆ ಹೊಡೆದಿದ್ದ,ಇದೇ ವಿಚಾರದಲ್ಲಿ ಅಮಿತ್ ಸ್ನೇಹಿತ ಅಮರ್ ಶುಕ್ರವಾರ ಮಧ್ಯಾಹ್ನ ನೀನು ಅಮಿತ್ ಗೆ ಹೊಡೆದಿದ್ದು ಯಾಕೆ ಎಂದು ಆಶ್ಲೇಷ್ ನನ್ನು ಕೇಳಿದಾಗ ಆತ ತನ್ನಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ಅಮರ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯುವಕರು ಮೆಹೆಂದಿ ಕಾರ್ಯಕ್ರಮಗಳಲ್ಲಿ ಕುಡಿಯುವುದೇ ಫ್ಯಾಶನ್ ಆಗಿದೆ. ಹದಿಹರೆಯದ ಹುಡುಗರೇ ಅಮಲಿನ ದಾಸರಾಗಿ ಪರಸ್ಪರ ಹೊಡದಾಟ ನಡೆಸುವುದು ನಿಜಕ್ಕೂ ವಿಪರ್ಯಾಸ. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಸರಿಯಾದ ಸಂಸ್ಕಾರ ನೀಡಿದ್ದಲ್ಲಿ ಬೆಳೆಯುತ್ತಾ ಸುಸಂಸ್ಜೃತರಾಗಿ ಬೆಳೆಯಲು ಸಾಧ್ಯವಿದೆ.