ಕಾರ್ಕಳ: 2024-25ನೇ ಸಾಲಿಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಪ್ರಾರಂಭವಾಗಿದೆ. ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಕಾರ್ಕಳ ಪುರಸಭಾ ವ್ಯಾಪ್ತಿಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ವಿಮಾ ಸೌಲಭ್ಯ ದೊರಕಲಿದೆ.
ಪ್ರತಿ ಹೆಕ್ಟೇರ್ ಅಡಿಕೆ ಬೆಳೆಗೆ ರೂ.128000.00 ವಿಮಾ ಮೊತ್ತವಾಗಿದ್ದು, ರೈತರು ರೂ.6400.00 ವಿಮಾ ಕಂತು ಪಾವತಿಸಬೇಕು ಹಾಗೂ ಪ್ರತಿ ಹೆಕ್ಟೇರ್ ಕಾಳುಮೆಣಸು ಬೆಳೆಗೆ ರೂ.47000.00 ವಿಮಾ ಮೊತ್ತವಾಗಿದ್ದು ರೈತರು ರೂ.2350.00 ವಿಮಾ ಕಂತು ಪಾವತಿಸಬೇಕಾಗುತ್ತದೆ.
ವಿಮಾ ನೊಂದಾವಣೆಗೆ ಜುಲೈ.1 ಅಂತಿಮ ದಿನಾಂಕವಾಗಿದ್ದು, ಆಸಕ್ತ ರೈತರು ತಮ್ಮ ಬೆಳೆ ಸಾಲ ಪಡೆದ ಬ್ಯಾಂಕ್/ಸೊಸೈಟಿಯನ್ನು ಸಂಪರ್ಕಿಸಬಹುದು. ಬೆಳೆ ಸಾಲ ಹೊಂದಿರದ ರೈತರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ. 9449440812 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕಾರ್ಕಳ ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.