Share this news

ಕಾರ್ಕಳ: ಕ್ರೆಡಿಟ್ ಕಾರ್ಡ್ ನ ಒಟಿಪಿ ಪಡೆದ ವಂಚಕ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 76 ಸಾವಿರ ಹಣ ಲಪಟಾಯಿಸಿದ ಪ್ರಕರಣ ನಡೆದಿದೆ.
ಕಾರ್ಕಳ ಕಸಬಾ ಗ್ರಾಮದ ಬಾಲಚಂದ್ರ (67)ಎಂಬವರು ವಂಚನೆಗೊಳಗಾದ ವ್ಯಕ್ತಿ. ಬಾಲಚಂದ್ರ ಅವರು Axis ಬ್ಯಾಂಕ್‌‌ ಹಾಗೂ IDFC ಬ್ಯಾಂಕಿನಲ್ಲಿ ಕ್ರೆಡಿಟ್‌ ಕಾರ್ಡ್ ನ್ನು ಹೊಂದಿದ್ದು, ಸೆ 30 ರಂದು ವಂಚಕ ಮನುಜ್‌ ಶರ್ಮಾ ಎಂಬಾತ ಬಾಲಚಂದ್ರ ಅವರಿಗೆ ಕರೆ ಮಾಡಿ HDFC ಬ್ಯಾಂಕಿನ ಸಮಸ್ಯೆಯನ್ನು ನಿವಾರಿಸಲು Axis ಹಾಗೂ IDFC ಬ್ಯಾಂಕಿನ ವಿವರಗಳನ್ನು ಕೊಡಲು ಹೇಳಿದ್ದಾನೆ.ಇದನ್ನೇ ನಂಬಿದ ಬಾಲಚಂದ್ರ ಅವರು ಎಲ್ಲಾ ಮಾಹಿತಿ ನೀಡಿದ ಬಳಿಕ ಓಟಿಪಿ ಬರುವುದಾಗಿ ಹೇಳಿದಾಗ ಅವರು ಓಟಿಪಿಯನ್ನು ಕೂಡ ವಂಚಕನಿಗೆ ಕೊಟ್ಟಿದ್ದಾರೆ.
ಬಳಿಕ ಅ. 01 ರಂದು ಬಾಲಚಂದ್ರ ಅವರ ಬ್ಯಾಂಕ್ ಖಾತೆಯಿಂದ 76,188 ರೂಪಾಯಿ Axis Bank ಹಾಗೂ IDFC ಬ್ಯಾಂಕ್‌ ನ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಕಡಿತವಾಗಿದೆ.
ವಂಚಕನಿಗೆ ತನ್ನ ಬ್ಯಾಂಕ್ ಖಾತೆಯ ದಾಖಲೆ ಕೊಟ್ಟು ಹಣ ಕಳೆದುಕೊಂಡ ಬಾಲಚಂದ್ರ ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

Leave a Reply

Your email address will not be published. Required fields are marked *