ಕಾರ್ಕಳ: ಕಾರನ್ನು ಮಾರಾಟ ಮಾಡಿದ ವ್ಯಕ್ತಿ ಹಣ ಪಡೆದ ಬಳಿಕ ಕಾರಿನ ದಾಖಲೆ ಪತ್ರವನ್ನು ವರ್ಗಾವಣೆ ಮಾಡದೇ ಹಾಗೂ ಪಡೆದ ಹಣವನ್ನು ಕೂಡ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ರಿಝ್ವಾನ್ (36) ವಂಚನೆಗೊಳಗಾದ ವ್ಯಕ್ತಿ. ಇವರು ಕಳೆದ ಏ.26 ರಂದು ಗಿರೀಶ್ ಎಂಬವರ ಬಳಿ 10 ಲಕ್ಷ ರೂಪಾಯಿಗೆ ಕಾರು ಖರೀದಿಸುವ ಮಾತುಕತೆ ನಡೆಸಿದ್ದರು.ಅದರಂತೆ
ರಿಝ್ವಾನ್ ಗಿರೀಶ್ ಅವರ ಕಾರನ್ನು ಪಡೆಯುವ ಸಂದರ್ಭದಲ್ಲಿ ಗಿರೀಶ್ ಖಾತೆಗೆ 4,56,500 ಆನಲೈನ್ ಮೂಲಕ ಪಾವತಿಸಿದ್ದು, ನಂತರ 56,500 ಹಣವನ್ನು ನಗದಾಗಿ ನೀಡಿದ್ದು, ಒಟ್ಟು 5,13,000/- ರೂ ಹಣವನ್ನುನೀಡಿದ್ದರು.ಈ ಬಳಿಕ ಗಿರೀಶ್ ಅವರು ಉಳಿದ ಹಣವನ್ನು ಕಾರಿನ ದಾಖಲಾತಿಯನ್ನು ನೀಡಿದ ಬಳಿಕ ಕೊಡುವಂತೆ ಹೇಳಿದ್ದರು. ಬಳಿಕ ಗಿರೀಶ್ ಅವರು ಕಾರಿನ ದಾಖಲಾತಿ ನೀಡುತ್ತೇನೆಂದು ನಂಬಿಸಿ ದಾಖಲಾತಿಯನ್ನು ನೀಡದೆ ವಂಚಿಸಿದ್ದು ಮಾತ್ರವಲ್ಲದೇ ತನ್ನ ಹಣವನ್ನು ಕೂಡ ವಾಪಾಸು ನೀಡದೇ ವಂಚಿಸಿದ್ದಾರೆ ಎಂದು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ