ಕಾರ್ಕಳ: ಜೇಸಿಐ ಕಾರ್ಕಳ ರೂರಲ್’ನ ಜೆಜೆಸಿ ವತಿಯಿಂದ ಹದಿಹರೆಯದ ಶಿಕ್ಷಣ ತರಬೇತಿ ಕಾರ್ಯಕ್ರಮವು ಜು.05 ರಂದು ಶನಿವಾರ ಕಾರ್ಕಳ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಯಲ್ಲಿ ಜರುಗಿತು.
ವನಿತಾ ಅರುಣ್ ಭಂಡಾರಿ ಇವರು ತರಬೇತಿ ನಡೆಸಿಕೊಟ್ಟರು.ಎಸ್ ಎಸ್ ಎಲ್ ಸಿ ಯ 125 ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.
ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳ ರೂರಲ್ ಅಧ್ಯಕ್ಷ ಜೆಸಿ ಅರುಣ್ ಪೂಜಾರಿ ಮಾಂಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್ರಾಯ ನಾಯಕ್, ಜೂನಿಯರ್ ಜೇಸಿ ಚೇರ್ ಪರ್ಸನ್ ದಿಯಾ ರಾಜೇಶ್ ಭಂಡಾರಿ,ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್ ಪಟ್ಲ, ಜೆಸಿಐ ಕಾರ್ಕಳ ರೂರಲ್ ನ ನಿಕಟ ಪೂರ್ವ ಅಧ್ಯಕ್ಷ ಜೆಸಿ ಸಂತೋಷ್ ಬಂಗೇರ, ಪೂರ್ವ ಅಧ್ಯಕ್ಷರುಗಳಾದ ಜೆಸಿ ವೀಣಾ ರಾಜೇಶ್, ಜೆಸಿ ಶೋಭಾ ಭಾಸ್ಕರ್, ಉಪಸ್ಥಿತರಿದ್ದರು.