
ಕಾರ್ಕಳ, ಏ.29: ಕಾರ್ಕಳ ತಾಲೂಕಿನ ನಿಟ್ಟೆಯ ಅಬ್ದುಲ್ ಆಸೀಫ್ ಎಂಬವರ ಒಂದೂವರೆ ತಿಂಗಳ ಹಸುಗೂಸು ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ಅಬ್ದುಲ್ ಅವರ ಮೊಹಮ್ಮದ್ ಅಫ್ಲಾಲ್ ಎಂಬ ಮಗುವಿಗೆ ಏ.27 ರಂದು ಬೆಳಗಿನ ಜಾವ ಏಕಾಏಕಿ ಮೂಗಿನಲ್ಲಿ ರಕ್ತ ಸೋರಲು ಆರಂಭಿಸಿತ್ತು. ಕೂಡಲೇ ಮಗುವನ್ನು ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಮಗು ರಾತ್ರಿಯ ವೇಳೆಗೆ ಮೃತಪಟ್ಟಿದೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
