
ಹೆಬ್ರಿ,ಏ.29: ಹೆಬ್ರಿ ತಾಲೂಕಿನ ಬೇಳಂಜೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬೇಳಂಜೆಯ ನವೀನ ಶೆಟ್ಟಿ(42ವ) ಮೃತಪಟ್ಟವರು.
ಅವರು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ಅದರಿಂದ ಕಾಲಿನ ಹೆಬ್ಬೆರಳನ್ನು ಕಳೆದುಕೊಂಡಿದ್ದರು. ಚಿಕಿತ್ಸೆ ಪಡೆಯುತ್ತಿದ್ದರೂ ಖಾಯಿಲೆ ಗುಣಮುಖವಾಗಿರಲಿಲ್ಲ. ಎಂದಿನಂತೆ ತಮ್ಮ ಮನೆಯಲ್ಲಿ ಏ.27ರಂದು ರಾತ್ರಿ ಮಲಗಿದ್ದವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
