Share this news

ಕಾರ್ಕಳ,ಜ12: ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮತ್ತು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮವು ಜ. 11ರಂದು ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈ ಟಿಯ ಸಾರಸ್ವತ ಸೌಧ ಸಭಾಂಗಣದಲ್ಲಿ ನಡೆಯಿತು.

ರಾಜಾಪುರ ಸರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಸುರೇಂದ್ರ ನಾಯಕ್ ಶಿಬಿರವನ್ನು ಉದ್ಘಾಟಿಸಿ ಅಗತ್ಯವುಳ್ಳವರಿಗೆ ಶಿಬಿರದ ಪ್ರಯೋಜನ ದೊರಕುವಂತಾಗಲಿ ಎಂದರು.
ಡಾ| ಅಂಕಿತಾ ಕಲ್ಮಾಡಿ ಮಾತನಾಡಿ ಕಿವಿಯ ಪಂಚೇಂದ್ರಿಯಗಳಲ್ಲಿ ಕಿವಿಯ ಅರೈಕೆ ಅತ್ಯಮೂಲ್ಯವಾಗಿದೆ. ಸ್ಥಳೀಯವಾಗಿ ಸಿಗುವ ಕಿವಿಯ ಉಪಕರಣಗಳನ್ನು ಉಪಯೋಗಿಸಿಕೊಂಡು ಇನ್ನಷ್ಟು ಸಮಸ್ಯೆಗೆ ಒಳಪಡದೆ ಸರಿಯಾಗಿ ಪರೀಕ್ಷಿಸಿ ಡಿಜಿಟಲ್ ಉಪಕರಣಗಳನ್ನು ಉಪಯೋಗಿಸುವಂತೆ ಸಲಹೆ ನೀಡಿದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಹರೀಶ್ ಆಚಾರ್ಯ, ಡಾ| ಅಂಕಿತಾ ಕಲ್ಮಾಡಿ, ಟೀಮ್ ಈಶ್ವರ್ ಮಲ್ಪೆ ತಂಡದ ಲವ ಬಂಗೇರ ಉಪಸ್ಥಿತರಿಸದ್ದರು. ಸೊಸೈಟಿಯ ಹಿರಿಯ ವ್ಯವಸ್ಥಾಪಕರಾದ ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಿಬಿರದಲ್ಲಿ ಸುಮಾರು 19ಮಂದಿ ಭಾಗವಹಿಸದ್ದರು. ಅಗತ್ಯವುಳ್ಳ 8 ಮಂದಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಡಾ| ಅಂಕಿತಾ ಕಲ್ಮಾಡಿ ಕಿವಿಯ ಶ್ರವಣ ತಪಾಸಣೆ ನಡೆಸಿದರು.

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *