ಕಾರ್ಕಳ : ದೇಶ ಮೊದಲು ಅನಂತರ ನಾವು ಎಂಬ ಭಾವನೆ ಪ್ರತಿಯೊಬ್ಬ ಬಾರತೀಯನಲ್ಲಿ ಚಿಗುರೊಡೆದಾಗ ದೇಶ ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾದಲ್ಲಿ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಇವರ ಸಹಯೋಗದಲ್ಲಿ 10 ದಿನಗಳ ಕಾಲ ನಡೆದ ಟಿ.ಎಸ್.ಸಿ-1/ ಸಿ.ಎ.ಟಿ.ಸಿ ಎನ್.ಸಿ.ಸಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೆಡೆಟ್ ಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಶಿಬಿರದಲ್ಲಿ ಕಲಿತ ಪಾಠಗಳು ಮುಂದಿನ ಜೀವನದಲ್ಲಿ ಅಳವಡಿಸಿಕೊಂಡು ದೇಶ ಸೇವೆಗೆ ಅರ್ಪಣಾ ಮನೋಭಾವದಿಂದ ಭಾಗವಹಿಸಿ, ಸೇನೆಯಲ್ಲಿ ಉನ್ನತ ಸ್ಥಾನವನ್ನು ತುಂಬುವ ಭಾಗ್ಯ ತಮ್ಮದಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಕೆಡೆಟ್‌ಗಳಿಗೆ ನಡೆಸಿದ ವಿವಿಧ ಸ್ಫರ್ಧೆಗಳ ಬಹುಮಾನವನ್ನು ವಿತರಿಸಲಾಯಿತು.
ಈ ಸಂದರ್ಭ ಎನ್.ಸಿ.ಸಿ. ಕಮಾಂಡಿಂಗ್ ಆಫಿಸರ್ ಕರ್ನಲ್ ರಾಹುಲ್ ಚೌಹಾನ್, ಲೆಫ್ಟಿನೆಂಟ್ ಕರ್ನಲ್ ಎಂ.ಎಸ್.ರಾವತ್, ಕಾರ್ಕಳ ಜ್ಞಾನಸುಧಾ ಸಿ.ಇ.ಒ. ಹಾಗೂ ಪ್ರಾಂಶುಪಾಲರಾದ ದಿನೇಶ್. ಎಂ. ಕೊಡವೂರ್, ಪಿ.ಆರ್.ಒ. ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲ ಸಾಹಿತ್ಯ ಹಾಗೂ ಎನ್.ಸಿ.ಸಿ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳ 450 ಎನ್.ಸಿ.ಸಿ. ಕೆಡೆಟ್‌ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಶಿಬಿರಾಧಿಕಾರಿ ಕ್ಯಾ.ನವ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕ್ಯಾಪ್ಟನ್ ಡಾ.ಇ.ಎಸ್.ಕೆ.ಉಡುಪ ವರದಿ ಮಂಡಿಸಿದರು. ಚೀಫ್ ಆಫಿಸರ್ ವಿವೇಕಾನಂದ ಹಾಗೂ ಲೆಫ್ಟಿನೆಂಟ್ ಮಂಜುನಾಥ್ ಮುದೂರು ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಫಸ್ಟ್ ಆಫಿಸರ್ ಸುರೇಂದ್ರ ಶೆಟ್ಟಿ ಸ್ವಾಗತಿಸಿದರು.
ಎನ್.ಸಿ.ಸಿ. ಕಮಾಂಡಿಂಗ್ ಆಫಿಸರ್
ಕರ್ನಲ್ ರಾಹುಲ್ ಚೌಹಾನ್, ಲೆಫ್ಟಿನೆಂಟ್ ಕರ್ನಲ್ ಎಂ.ಎಸ್.ರಾವತ್‌ರವರ ಉಸ್ತುವಾರಿಯಲ್ಲಿ ನಡೆದ ಹತ್ತು ದಿನಗಳ ಶಿಬಿರದಲ್ಲಿ ಕಡೆಟ್‌ಗಳಿಗೆ ಜೂನ್ 2ರಂದು ವ್ಯಕ್ತಿತ್ವ ನಿರ್ಮಾಣದ ಕುರಿತಂತೆ ಜ್ಞಾನಸುಧಾದ ಸಂಖ್ಯಾಶಾಸ್ತ್ರ ಉಪನ್ಯಾಸಕರಾದ ಲೆಫ್ಟಿನೆಂಟ್ ಮಂಜುನಾಥ್ ಮುದೂರು ಮಾಹಿತಿ ನೀಡಿದರು. ಜೂನ್ 4ರಂದು ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಕುಕ್ಕುಂದೂರು ಪ್ರಾ.ಆ.ಕೇಂದ್ರದ ಆರೋಗ್ಯಾಧಿಕಾರಿ ಡಾ.ಪ್ರತೀಕ್ಷ ಶೆಟ್ ವಿಚಾರ ಮಾಹಿತಿ ನೀಡಿದರು. ಜೂನ್ 5ರಂದು ಬೆಂಕಿ ಸಹಿತ ಆಕಸ್ಮಿಕ ಅವಘಡಗಳಿಂದ ಪಾರಾಗುವ ಕುರಿತಂತೆ ಫೈರ್ ಸರ್ವಿಸ್ ಸ್ಟೇಶನ್ ಕಾರ್ಕಳ ಇವರಿಂದ ಪ್ರಾತ್ಯಕ್ಷಿತೆಯೊಂದಿಗೆ ಜಾಗೃತಿಯನ್ನು ಹಾಗೂ ವಿಶ್ವ ಪರಿಸರ ದಿನದ ಕುರಿತು ಶಿಬಿರಾಧಿಕಾರಿ ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಇ.ಎಸ್.ಕೆ.ಉಡುಪರವರು ಮಾಹಿತಿ ನೀಡಿದರು. ಜೂನ್ 6ರಂದು ಎನ್.ಸಿ.ಸಿ ಅಧಿಕಾರಿಗಳಿಂದ ಭಾರತೀಯ ಸೇನೆಗೆ ಸೇರುವ ಅವಕಾಶಗಳ ಕುರಿತಂತೆ ಮಾಹಿತಿ ವಿನಿಮಯ ನಡೆಯಿತು. ಜೂನ್ 7ರಂದು ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಅಜೆಕಾರಿನ ಎಸ್.ಐ. ರವಿ ಡಿ.ಕೆ ಉಪನ್ಯಾಸ ನಡೆಸಿಕೊಟ್ಟರು. ಅ.ಪ.ಗೋ.ಎ. ಟ್ರಸ್ಟ್ ನ ಅಧ್ಯಕ್ಷರಾಧ ಡಾ.ಸುಧಾಕರ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಜೂನ್ 8ರಂದು ಸೈಬರ್ ಅಪರಾಧ ತಡೆ ನಿಗ್ರಹದ ಕುರಿತು ಉಡುಪಿ ಸೈಬರ್ ಸೆಲ್‌ನವರು ಜಾಗೃತಿಯನ್ನು ಮೂಡಿಸಿದರು.
ಶಿಬಿರಕ್ಕೆ ಮಂಗಳೂರಿನ ಗ್ರೂಪ್ ಹೆಡ್‌ಕ್ವಾರ್ಟರ್‌ನ ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ. ಭಗಸ್ತ, 2ಕ.ಇಂ.ಕೊಯ್ ಸುರತ್ಕಲ್ ಕಮಾಂಡಿಗ್ ಆಫಿಸರ್ ಕರ್ನಲ್ ಅನಿಲೇಶ್ ಕೌಶಿಕ್ ಹಾಗೂ 4ಕ.ಇಂ.ಕೊಯ್ ಕಮಾಂಡಿಗ್ ಆಫಿಸರ್ ಕರ್ನಲ್ ಕೊತ್ವಾಲ್‌ರವರು ಭೇಟಿ ನೀಡಿದರು.