ಕಾರ್ಕಳ: ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಫೆ.10 ರಂದು ರೌಂಡ್ಸ್ ನಲ್ಲಿದ್ದ ವೇಳೆ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದ್ದು, ಪೊಲೀಸರು 3 ಜಾನುವಾರು ಸಹಿತ ಸಾಗಾಟಕ್ಕೆ ಬಳಸಿದ್ದ ಗೂಡ್ಸ್ ವಾಹನ ಹಾಗೂ ಓರ್ವ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.
ನಲ್ಲೂರು ಗ್ರಾಮದ ನೇಲದಬೆಟ್ಟು ಎಂಬಲ್ಲಿ ಗೂಡ್ಸ್ನಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅಶೋಕ ಲೈಲ್ಯಾಂಡ್ ಗೂಡ್ಸ್ ನಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಹಗ್ಗಗಳಿಂದ ಕಟ್ಟಿ ವಾಹನದಲ್ಲಿ ತುಂಬಿಸಿದ್ದರು. ಪೊಲೀಸರು ವಾಹನದಲ್ಲಿದ್ದವರನ್ನು ವಿಚಾರಿಸಿದಾಗ ಉಸ್ಮಾನ್ ಎಂಬಾತ ಉಪ್ಪಿನಂಗಡಿ ಕರಾಯದ ತೌಸೀಫ್ ಮತ್ತು ಫೈಜಲ್ ಎಂಬವರೊAದಿಗೆ ಸೇರಿಕೊಂಡು ಕಾರ್ಕಳ ನಲ್ಲೂರಿನ ಸತೀಶ ಎಂಬವರಿAದ ಮಾಂಸ ಮಾಡಿ ಮಾರಾಟ ಮಾಡುವುದಕ್ಕಾಗಿ ಜಾನುವಾರುಗಳನ್ನು ಖರೀದಿಸಿ ಮುಸ್ತಾಫ ಎಂಬವನ ಗೂಡ್ಸ್ ನಲ್ಲಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಪೊಲೀಸರು ಆರೋಪಿ ಉಸ್ಮಾನ್ ಸಹಿತ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡು, ಸಾಗಿಸುತ್ತಿದ್ದ 3 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.