ಕಾರ್ಕಳ : ತಾಲೂಕಿನ ಕಸಬಾ ಗ್ರಾಮದ ಕಾಬೆಟ್ಟು ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಕಾರ್ಕಳ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಂತೋಷ್ ರೇಗೋ ಎಂಬವರು ಮಂಗಳೂರಿನ ಅಡ್ಡೂರು ಎಂಬಲ್ಲಿ ಸರಕಾರಿ ಹೊಳೆಯಿಂದ ಇಮ್ತಿಯಾಜ್ ಅಡ್ಡೂರು ಮತ್ತು ಶಾಹಿದ್ ಕಾರ್ಕಳ ಇವರು ಕಳವು ಮಾಡಿ ನೀಡಿದ ಮರಳನ್ನು ಟಿಪ್ಪರ್ ನಲ್ಲಿ ಸೆ.18 ರಂದು ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದಾಗ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಕಾಬೆಟ್ಟು ವೇಣುಗೋಪಾಲಕೃಷ್ಣ ದೇವಸ್ಥಾನದ ಬಳಿ ಆನೆಕೆರೆ ಕಡೆಯಿಂದ ಜೋಡುರಸ್ತೆಯ ಕಡೆಗೆ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಮರಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
in