Share this news

ಕಾರ್ಕಳ: ಗಾಂಧಿ ಪ್ರತಿಪಾದಿಸಿದ ತತ್ವ ಸಿದ್ದಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಮತ್ತು ಆ ತತ್ವ ಸಿದ್ದಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಈ ಸಿದ್ದಾಂತಗಳನ್ನು ಅನುಸರಿಸಿದರೆ ಮಾತ್ರವೇ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ದೇಶದ ಚುಕ್ಕಾಣಿ ಹಿಡಿದವರು ಮನಗಾಣಬೇಕು. ಆ ಮೂಲಕ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಸಾದ್ಯ ಎಂದು ಹಿರಿಯ‌ ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ ಹೇಳಿದರು.

ಅವರು ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಣೆಯ ಸಂದರ್ಭದಲ್ಲಿ ಮಾತನಾಡಿದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗಪ್ಪ ಮೇರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ದೀಪ ಬೆಳಗಿ ಉದ್ಘಾಟಿಸಿ ಸಂಧರ್ಬೋಜಿತ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಸುಬಿತ್ ಕುಮಾರ್, ಪ್ರತಿಮಾ ರಾಣೆ, ಸೀತಾರಾಮ್ , ರೆಹಮತ್ ಶೇಖ್, ಜಿಲ್ಲಾ ಕಾಂಗ್ರೇಸ್ ಉಪಾದ್ಯಕ್ಷ ಸುಧಾಕರ್ ಕೋಟ್ಯಾನ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಬಾನು ಭಾಸ್ಕರ್ ಪೂಜಾರಿ, ಪುರಸಭಾ ಸದಸ್ಯ ವಿವೇಕ್ ಶೆಣೈ, ಸೇವಾದಳ ಅದ್ಯಕ್ಷ ಅಬ್ದುಲ್ಲಾ ಸಾಣೂರು, ಅಲ್ಪಸಂಖ್ಯಾತ ಘಟಕದ ತನ್ವೀರ್ ತೆಳ್ಳಾರ್ ,ಭೂನ್ಯಾಯ ಮಂಡಳಿ ಸದಸ್ಯ ಸುನೀಲ್ ಭಂಡಾರಿ, ಗ್ಯಾರಂಟಿ ಸದಸ್ಯರಾದ ಹೇಮಂತ್, ಪಿಲಿಫ್ಸ್,, ಯುವ ಕಾಂಗ್ರೆಸ್ ಮಂಜುನಾಥ್ ಜೋಗಿ, ಪ್ರಕಾಶ್ ಆಚಾರ್ಯ, ಬ್ಲಾಕ್ ಪಧಾದಿಕಾರಿಗಳು ಉಪಸ್ಥಿತರಿದ್ದರು.

ಜಾರ್ಜ್ ಕ್ಯಾಸ್ಟಲೀನೋ ಸ್ವಾಗತಿಸಿ, ರಮೇಶ್ ಪತೊಂಜಿಕಟ್ಟೆ ಧನ್ಯವಾದವಿತ್ತರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *