
ಕಾರ್ಕಳ: ತಾಲೂಕಿನ ಸಾಣೂರು ಗ್ರಾಮದ ಪ್ರಶಾಂತ (35) ಎಂಬವರು ನ. 05 ರಿಂದ ನಾಪತ್ತೆಯಾಗಿದ್ದಾರೆ.
ಅಂದು ಬೆಳಿಗ್ಗೆ 8:30 ಗಂಟೆಗೆ ಅವರ ಮನೆ ಪವಮಾನ ನಿವಾಸದಿಂದ ಕಾರಿನಲ್ಲಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೆ ನಾಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

