ಕಾರ್ಕಳ: ಕಾರ್ಕಳ ಮೆಸ್ಕಾಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಟ್ಟೆ ಗ್ರಾಮದ ನಿತ್ಯಾನಂದ (26) ಆತ್ಮಹತ್ಯೆ ಮಾಡಿಕೊಂಡ ಯುವಕ.
ನಿತ್ಯಾನಂದ ಅವರು ಶನಿವಾರ ಬೆಳಗ್ಗೆ ಬೈಕಿನಲ್ಲಿ ಕೆಲಸಕ್ಕೆಂದು ಹೋದವರು ಕೆಲಸಕ್ಕೆ ಹೋಗದೇ ಇವರು ಕಾರ್ಕಳ ಕೆ.ಇ.ಬಿ.ಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ದಿನಾಂಕ 17/05/2025 ರಂದು ಬೆಳಿಗ್ಗೆ 7:30 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಬೈಕ್‌ನಲ್ಲಿ ಹೋದವರು ನಾಪತ್ತೆಯಾಗಿದ್ದರು.ಬಳಿಕ ಅವರನ್ನು ಹುಡುಕಾಡಿದಾಗ ಅವರ ಮನೆಯ ಸಮೀಪ ತಿರುಮಲಬೆಟ್ಟು ದಿವಾಕರ ಹಾಗೂ ಅವರ ಕುಟುಂಬದವರಿಗೆ ಸೇರಿದ ರಬ್ಬರ್ ತೋಟದಲ್ಲಿ ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ನಿತ್ಯಾನಂದ ಸಾಲವನ್ನು ಮಾಡಿ ಹಣ ಪಡೆದುಕೊಂಡಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗದೇ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.