ಕಾರ್ಕಳ: ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಕಾಂತೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸಾಗುತ್ತಿದ್ದ ವ್ಯಕ್ತಿಯ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಎಳೆಯೊಯ್ದ ಘಟನೆ ಡಿ.2 ರಂದು ನಡೆದಿದೆ.
ಸೋಮವಾರ ಹಾಡುಹಗಲೇ ಈ ಕೃತ್ಯ ನಡೆದಿದ್ದು, ಕಾಂತಾವರದ ಗೋಪಿ ಎಂಬವರು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಾಸಾಗುತ್ತಿದ್ದಾಗ ಬಾರಾಡಿ ಕಡೆಯಿಂದ ಬೈಕಿನಲ್ಲಿ ಬಂದಾತ ಗೋಪಿ ಅವರನ್ನು ಮಾತನಾಡಿಸುವ ನೆಪದಲ್ಲಿ ಕೈಹಿಡಿದು ನಿಲ್ಲಿಸಿ ಕತ್ತಿನಲ್ಲಿದ್ದ ರೂ.1,20,000 ಮೌಲ್ಯದ ಚಿನ್ನದ ಬೈನ್ ಎಳೆದೊಯ್ದಿದ್ದಾನೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.