ಕಾರ್ಕಳ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74ನೇ ಜನ್ಮದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿಯು ದೇಶದಾದ್ಯಂತ ಸೇವಾ ಪಾಕ್ಷಿಕ ಯೋಜನೆಯಡಿ ವಿವಿಧ ಸೇವಾ ಕಾರ್ಯಗಳನ್ನು ಆಯೋಜಿಸಿದ್ದು, ಇದರ ಅಂಗವಾಗಿ ಬಿಜೆಪಿ ಕಾರ್ಕಳ ಮಂಡಲ ವತಿಯಿಂದ ವಿವಿಧ ಕಾರ್ಯಕ್ರಮಗಳು ಜರುಗಿತು.
ಮಾಹೆ ಸಂಸ್ಥೆ, ಮಣಿಪಾಲ ಹಾಗೂ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಇವರ ಸಹಯೋಗದೊಂದಿಗೆ ಕಾರ್ಕಳ ಬಿಜೆಪಿ ಯುವ ಮೋರ್ಚಾದಿಂದ ʼರಕ್ತದಾನ ಶಿಬಿರʼ ಹಾಗೂ ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ʼಆರೋಗ್ಯ ತಪಾಸಣೆ ಹಾಗೂ ಕ್ಯಾನ್ಸರ್ ಕುರಿತು ಜಾಗೃತಿ ಹಾಗೂ ಮಾಹಿತಿ ಶಿಬಿರʼ ವು ʼವಿಕಾಸʼ ಜನಸೇವಾ ಕಚೇರಿ ಸಭಾಂಗಣದಲ್ಲಿ ನಡೆಯಿತು
ಬಿಜೆಪಿ ಹಿರಿಯರು ನ್ಯಾಯವಾದಿ ಎಂ. ಕೆ ವಿಜಯ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ನರೇಂದ್ರ ಮೋದಿಯವರ ಕಾರ್ಯವೈಖರಿ, ಅವರ ವ್ಯಕ್ತಿತ್ವ, ದೂರದೃಷ್ಟಿತ್ವದ ಬಗ್ಗೆ ಶ್ಲಾಘಿಸಿ ಕಾರ್ಯಕರ್ತರನ್ನು ಪ್ರೇರೇಪಿಸಿದರು.
ಮಾಹೇ ಸಂಸ್ಥೆಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಮಹಿಳೆಯರಿಗಾಗಿ ನಡೆದ ಮಾಹಿತಿ ಮತ್ತು ತಪಾಸಣಾ ಶಿಬಿರದಲ್ಲಿ ಸುಮಾರು 140 ಮಂದಿ ಮಹಿಳೆಯರು ಭಾಗವಹಿಸಿ ಕ್ಯಾನ್ಸರ್ ಕುರಿತು ಮಾಹಿತಿ ಪಡೆದುಕೊಂಡರು ಹಾಗೂ 84 ಮಂದಿ ತಪಾಸಣೆಗೊಳಗಾಗಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಯುವ ಮೋರ್ಚಾ ಕಾರ್ಕಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜಿಸಿ 82 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
ಈ ಸಂದರ್ಭ ಡಾ. ಕಾರ್ತಿಕ್ ಅಯ್ಯರ್, ವೈದ್ಯಾಧಿಕಾರಿ, ರಕ್ತ ನಿಧಿ ಕೇಂದ್ರಮಣಿಪಾಲ, ವಿಶ್ವೇಶ್ ಆಚಾರ್ಯ, ತಾಂತ್ರಿಕ ಸಲಹೆಗಾರರು ರಕ್ತ ನಿಧಿ ಕೇಂದ್ರ ಮಣಿಪಾಲ ಹಾಗೂ ಅವರ ತಂಡ, ಶ್ರೀ ಆಶ್ಲಿನ್, ಸಾರ್ವಜನಿಕ ಸಂಪರ್ಕಅಧಿಕಾರಿ ಕೆ.ಎಮ.ಸಿ.ಕಾರ್ಕಳ, ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಜಿಲ್ಲಾ ಪ್ರ. ಕಾರ್ಯದರ್ಶಿ ರೇಷ್ಮ ಉದಯ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಮೋರ್ಚಗಳ ಅಧ್ಯಕ್ಷರಾದ ವಿನಯ ಡಿ ಬಂಗೇರ ಮತ್ತು ರಾಕೇಶ್ ಶೆಟ್ಟಿ, ಪ್ರಮುಖರಾದ ರವೀಂದ್ರ ಕುಮಾರ್, ವೀಣಾ ಶೆಟ್ಟಿ, ಮಾಲಿನಿ ಶೆಟ್ಟಿ , ವಿಖ್ಯಾತ್ ಶೆಟ್ಟಿ ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಹಾಗೂ ಯುವ ಮೋರ್ಚಾದ ತಾಲೂಕು ಹಾಗೂ ಶಕ್ತಿ ಕೇಂದ್ರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು
in