
ಕಾರ್ಕಳ : ನಲ್ಲೂರು ಗ್ರಾಮದ ಕರ್ಮರಟ್ಟೆ ಪಡೀಲುಬೆಟ್ಟು ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ, 200 ಕೆಜಿ ಗಿಂತ ಅಧಿಕ ದನದ ಮಾಂಸವನ್ನು ವಸಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಪ್ರಮುಖ ಆರೋಪಿ ಅಶ್ರಫ್ ಸೇರಿದಂತೆ ನವಾಜ್, ಅಫ್ತಾಬ್ (ಅಪ್ಪು) ಪರಾರಿಯಾಗಿದ್ದಾರೆ.

ಅಶ್ರಫ್ ಪಡೀಲುಬೆಟ್ಟುವಿನ ತನ್ನ ಮನೆಯನ್ನೇ ಅಕ್ರಮ ಕಸಾಯಿಖಾನೆಯಾಗಿ ಮಾಡಿಕೊಂಡಿದ್ದು, ಹಲವು ಸಮಯದಿಂದ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದ.ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಇಂದು (ನ.11) ಬೆಳಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಾಂಸವನ್ನು ಮಾರಾಟ ಮಾಡಲು ಸ್ವಿಫ್ಟ್ ಡಿಸೈರ್ ಕಾರಿನ ಡಿಕ್ಕಿಯಲ್ಲಿ ಇರಿಸಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.ಬಳಿಕ ಮನೆ ಪರಿಶೀಲನೆ ನಡೆಸಿದಾಗ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 60 ಕೆ.ಜಿ.ಯಷ್ಟು ದನದ ಮಾಂಸ ಪತ್ತೆಯಾಗಿದೆ. ಅಲ್ಲದೇ ಮಾಂಸ ಮಾಡಲು ತಂದಿದ್ದ ತಂದಿದ್ದ ಮತ್ತೊಂದು ದನ ತೋಟದಲ್ಲಿ ಪತ್ತೆಯಾಗಿದೆ.

ಪ್ರಮುಖ ಆರೊಪಿ ಅಶ್ರಫ್ ಈ ಹಿಂದೆ ಅಶೋಕ್ ಶೆಟ್ಟಿ ಎನ್ನುವ ಹೆಸರಿನಲ್ಲಿ ಮುಂಬೈನಲ್ಲಿ ನೆಲೆಸಿ ಅಲ್ಲಿ ರೌಡಿಸಂ ಮಾಡಿ ಅಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ. ಅಲ್ಲಿಂದ ಗಡಿಪಾರಾಗಿದ್ದ ಆತ ತಿಂಗಳ ಹಿಂದೆ ಊರಿಗೆ ಬಂದು ಪಡೀಲುಬೆಟ್ಟುವಿನಲ್ಲಿ ನೆಲೆಸಿದ್ದ. ಅಲ್ಲದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿಯೂ ಈತ ಸ್ಪರ್ಧಿಸಿದ್ದ.


