ಕಾರ್ಕಳ: ಕಾರ್ಕಳ ತಾಲೂಕಿನ ಕುಂಟಾಡಿಯಲ್ಲಿ ರಬ್ಬರ್ ತೋಟದ ಕೆಲಸಗಾರರೇ 1 ಲಕ್ಷಕ್ಕೂ ಅಧಿಕ ಮೌಲ್ಯದ ರಬ್ಬರ್ ಶೀಟ್ ಸಹಿತ ಇತರ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ.
ತಾಲೂಕಿನ ಕಲ್ಯಾ ನಿವಾಸಿ ಮಹೇಶ್ ಎಂಬವರು ಕುಂಟಾಡಿ ಎಂಬಲ್ಲಿ ಅಡಿಕೆ ಮತ್ತು ರಬ್ಬರ್ ತೋಟದ ಕೃಷಿ ಮಾಡಿಕೊಂಡಿದ್ದು, ಕಳೆದ 8 ತಿಂಗಳಿನಿAದ ಕೆಲಸಕ್ಕಾಗಿ ಕೇರಳದ ಜೈಮೊಹನ್ ಮತ್ತು ಆತನ ಹೆಂಡತಿ ಜಾಜಿ ಮೊಳ್ ಎಂಬವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು.
ರಬ್ಬರ್ ಶೀಟ್‌ಗಳನ್ನು ಅದೇ ರಬ್ಬರ್ ತೋಟದ ಗೋಡೌನಿನಲ್ಲಿ ಸಂಗ್ರಹಿಸಿಟ್ಟಿದ್ದರು. ಫೆ.25 ರ ಸಂಜೆ ಮಹೇಶ್ ಜೈಮೋಹನ್‌ಗೆ ಕರೆ ಮಾಡಿ ಮಾತನಾಡಿದ್ದು, ಮರುದಿನ ಬೆಳಿಗ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಅನುಮಾನಗೊಂಡ ಮಹೇಶ್ ಗೋಡೌನಿಗೆ ಬಂದು ನೋಡಿದಾಗ ಗೋಡೌನಿನ ಬಾಗಿಲ ಬೀಗ ಮುರಿದು ರೂ.1,30,000 ಮೌಲ್ಯದ ರಬ್ಬರ್ ಶೀಟ್, ರೂ.10,000 ಮೌಲ್ಯದ ಹುಲ್ಲು ಕಟಿಂಗ್ ಯಂತ್ರ ಮತ್ತು ರೂ.2000 ಮೌಲ್ಯದ ಸ್ಪೆçà ಮಿಷನನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
