
ಕಾರ್ಕಳ, ಜ. 15: ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಣೂರಿನ ನವೀನ್ ಎಂಬವರು ತಮ್ಮ ಬೈಕಿನಲ್ಲಿ ಪುಲ್ಕೇರಿಯಿಂದ ಬಜಗೋಳಿಗೆ ಹೋಗುತ್ತಿದ್ದಾಗ ಕಸಬಾ ಗ್ರಾಮದ ಪ್ರಿಯದರ್ಶಿನಿ ಗ್ಯಾಸ್ ಗೋಡೌನ್ ಬಳಿ ಗೊಮ್ಮಟ ಬೆಟ್ಟ ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ.ಅಪಘಾತದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
