
ಕಾರ್ಕಳ, ಜ.15: ರಿಕ್ಷಾ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಹಾಗೂ ರಿಕ್ಷಾದಲ್ಲಿ ಪ್ರಯಾಣೆಸುತ್ತಿದ್ದ ಮಹಿಳೆ ಸೇರಿ ಇಬ್ಬರು ಗಾಯಗೊಂಡಿರುವ ಘಟನೆ ಕಾರ್ಕಳದ ಎಸ್.ವಿ.ಟಿ ಸರ್ಕಲ್ ಬಳಿ ನಡೆದಿದೆ.
ಈ ಅಪಘಾತದಿಂದ ಸ್ಕೂಟರ್ ಸವಾರ ರವಿಕಾಂತ್ ಕಾಮತ್ (60) ಹಾಗೂ ರಿಕ್ಷಾ ಪ್ರಯಾಣಿಕೆ ರಜನಿ ಎಂಬವರಿಗೆ ಗಾಯಗಳಾಗಿವೆ. ರವಿಕಾಂತ್ ಕಾಮತ್ ತನ್ನ ಸ್ಕೂಟರಿನಲ್ಲಿ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ಮಾರ್ಕೆಟ್ ಕಡೆಯಿಂದ ರಿಕ್ಷಾವನ್ನು ಚಾಲಕ ದಾಮೋದರ್ ಮಣಿಯಾಣಿ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರವಿಕಾಂತ್ ಅವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ರವಿಕಾಂತ್ ಅವರು ಸ್ಕೂಟರ್ ಸಹಿತ ರಸ್ತೆಗೆ ಬಿದ್ದು ಆಟೋರಿಕ್ಷಾ ಇವರ ಮೇಲೆ ಪಲ್ಟಿ ಹೊಡೆದ ಪರಿಣಾಮ ಬಲ ಕೈ ಹಾಗೂ ಬೆರಳಿಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿದೆ.ಇದಲ್ಲದೇ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ರಜಿನಿಯವರಿಗೂ ಗಾಯಗಳಾಗಿವೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

.
.
.
.
