ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದ ಸಾಣೂರಿನ ಸದಾನಂದ (36) ಎಂಬವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ
ಕಳೆದ 3-4 ವರ್ಷಗಳಿಂದ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದ ಸದಾನಂದ ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಿಯ್ಯಾರು ಗ್ರಾಮದ ಕರಿಯಕಲ್ಲು ರಾಕ್ ಸೈಡ್ ಬಾರ್ ಬಳಿ ಅಸ್ವಸ್ಥರಾಗಿ ಬಿದ್ದಿದ್ದವರನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ಮೂಲದ ಸ್ಥಳೀಯ ನಿವಾಸಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ರವಿ (46) ಎಂಬವರು ಸುಮಾರು 15 ವರ್ಷಗಳ ಹಿಂದೆ ತನ್ನ ಮನೆಯಿಂದ ಕಾರ್ಕಳಕ್ಕೆ ಬಂದು ಕೆಲಸ ಮಾಡಿಕೊಂಡಿದ್ದರು. ವಿಪರೀತ ಮದ್ಯ ಸೇವಿಸುವ ಚಟವನ್ನು ಹೊಂದಿದ್ದ ಅವರು ಆ.5 ರಂದು ಕಾರ್ಕಳ ಕಸಬಾ ಗ್ರಾಮದ ಸಾಗರ ಹೊಟೆಲ್ ಬಳಿ ಅಸ್ವಸ್ಥರಾಗಿ ಬಿದ್ದಿದ್ದು ಅವರನ್ನು ಕಾಕ್ಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ವಿಪರೀತ ಕುಡಿತದ ಚಟದಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.