ಕಾರ್ಕಳ: ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳದ ವಿದ್ಯಾರ್ಥಿ ಸಂಘದ ಉದ್ಘಾಟನೆ ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು.
ಮೊಬೈಲ್ ಅಪ್ಲಿಕೇಶನ್ ವಿದ್ಯುನ್ಮಾನ ಮತಯಂತ್ರ ಬಳಸುವುದರ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆಯ ಬಗ್ಗೆ ಕಾಲೇಜಿನ ಚುನಾವಣಾಧಿಕಾರಿ ರಾಜನೀತಿ ಶಾಸ್ತ್ರ ಉಪನ್ಯಾಸಕರಾದ ನೇಮಿರಾಜ್ ಶೆಟ್ಟಿ ತಿಳಿ ಹೇಳಿದರು. ಪಿಆರ್ಒ ಮತ್ತು ಎಪಿಆರ್ಒ, ಮತಗಟ್ಟೆ ಅಧಿಕಾರಿಗಳಾಗಿ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದ ಸಿಬ್ಬಂದಿಗಳು ಸಹಕರಿಸಿದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ
ದ್ವಿತೀಯ ಪಿಯುಸಿ ಕಲಾ ವಿಭಾಗದ ಕು.ಅಮೃತಾ, ಉಪಾಧ್ಯಕ್ಷರಾಗಿ ಪ್ರೌಢ ಶಾಲಾ ವಿಭಾಗ ಹತ್ತನೇ ತರಗತಿಯ ಸನ್ವಿತ್ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಕು.ಆರತಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಪ್ರಭು ಹಾಗೂ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್ ಅಭಿನಂದಿಸಿದರು.