ಕಾರ್ಕಳ: ಕಾರ್ಕಳ ತಾಲೂಕು ಪಂಚಾಯತ್ ನೂತನ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕೃಷ್ಣಾನಂದ,ಕೆ ಅಧಿಕಾರ ಸ್ವೀಕರಿಸಿದರು. ಕೃಷ್ಣಾನಂದ ಕೆ, ಅವರು ಕಾರ್ಕಳಕ್ಕೆ ವರ್ಗಾವಣೆಗೊಂಡು ಪ್ರಸ್ತುತ ಕಾರ್ಕಳ ಪಂಚಾಯತ್ ರಾಜ್ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ತಾಲೂಕು ಪಂಚಾಯತ್ ಪ್ರಭಾರ ಇಓ ಆಗಿದ್ದ ಶ್ರೀಮತಿ ವಿಜಯಾ ಅವರು ಕೃಷ್ಣಾನಂದ,ಕೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಭಾಸ್ಕರ,ಟಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.













in 






