ಕಾರ್ಕಳ: ಮನೆಗೆ ಬೀಗ ಹಾಕಿ ಮನೆಯ ಮಾಲೀಕ ಪ್ರವಾಸಕ್ಕೆ ಹೋಗಿದ್ದ ಹೋಗಿದ್ದ ವೇಳೆ ಕನ್ನ ಹಾಕಿದ ಖದೀಮರು ಮನೆಯಲ್ಲಿದ್ದ ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆಯ ಸಾತುರ್ನಿನ್ ಮತಾಯಸ್ ಎಂಬವರು 15.09.2025 ರಂದು ಮನೆಗೆ ಬೀಗ ಹಾಕಿ ಉತ್ತರ ಭಾರತದ ಲೇಹ್‌ಗೆ ತೆರಳಿದ್ದರು. ಅವರ ಪತ್ನಿಯೂ ಕಾರ್ಕಳದ ಬಂಗ್ಲೆಗುಡ್ಡೆಯ ಅತ್ತಿಗೆ ಮನೆಗೆ ಹೋಗಿದ್ದರು.
ಆದರೆ ನಿನ್ನೆ (ಅಕ್ಟೋಬರ್.1) ವಾಪಾಸು ಮನೆಗೆ ಬಂದು ನೋಡಿದಾಗ, ಕಳ್ಳರು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಬೆಡ್‌ರೂಮ್‌ನಲ್ಲಿ ಕಬ್ಬಿಣದ ಕಪಾಟನ್ನು ಒಡೆದು ಕಪಾಟಿನಲ್ಲಿದ್ದ ನಗದು ರೂ, 1,50,000, ಸುಮಾರು 24 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್, ಸುಮಾರು 12 ಗ್ರಾಮ್ ತೂಕದ 2 ಚಿನ್ನದ ಚಿನ್ನದ ಬಳೆಗಳು, , ಸುಮಾರು 25 ಗ್ರಾಮ್ ತೂಕದ ಚಿನ್ನದ ಚೈನ್ – 2, ಸುಮಾರು 12 ಗ್ರಾಮ್ ತೂಕದ ಚಿನ್ನದ 2 ಜೊತೆ ಕಿವಿಯ ರಿಂಗ್, ವಜ್ರದ ಪೆಂಟೆಂಡ್ ಇರುವ ಚಿನ್ನದ ಚೈನ್ – 1 ಅಂದಾಜು ಮೌಲ್ಯ ರೂ. 1.25000 ಹಾಗೂ ಒಂದು ಮುತ್ತಿನ ಹಾರ , ಅಮೇರಿಕನ್ ಡಾಲರ್ಸ್ ಅಂದಾಜು ಮೌಲ್ಯ-1000, ಬ್ರಿಟೀಷ್ ಪೌಂಡ್ಸ್ ಅಂದಾಜು ಮೌಲ್ಯ 500 ಒಟ್ಟು 6,50,000 ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.