ಕಾರ್ಕಳ: ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆರಾಧನಾ ಮಹೋತ್ಸವದ ಪ್ರಯುಕ್ತ ಗುರು ಪಾದುಕಾ ದಿಗ್ವಿಜಯ ರಥ ಯಾತ್ರೆಯು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪಾರಂಪರಿಕ ಕಟ್ಟಡವಾದ ಯಕ್ಷಗಾನ ಕಲಾ ಮಂದಿರದಲ್ಲಿ ಪೂಜಾ ಕೈಂಕರ್ಯದೊAದಿಗೆ ಆರಾಧನೆಗೊಂಡಿತು.
ಭುವನೇಂದ್ರ ಕಾಲೇಜಿನ ಆರಂಭದ ದಿನಗಳಲ್ಲಿ ಶ್ರೀಮದ್ ಸುಧೀಂದ್ರ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದ್ದರಲ್ಲದೆ, ಕಾಲೇಜಿನ ಸುವರ್ಣೋತ್ಸವದ ಸಂದರ್ಭದಲ್ಲಿಯೂ ಆಶೀರ್ವಚಿಸಿದ್ದರು. ಇದೀಗ ಕಾಲೇಜು ಅರುವತ್ತೆರಡು ವರುಷಗಳನ್ನು ಪೂರೈಸಿದ್ದು, ಆಡಳಿತ ಮಂಡಳಿ ಅಧ್ಯಕ್ಷರಾದ ಸಿಎ ಶಿವಾನಂದ ಪೈ ಪಾದಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರ ಹೆಗ್ಡೆ, ಟಿ ಎ ಜಗದೀಶ್, ವೆಂಕಟೇಶ್ ಪ್ರಭು, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಕೋಟ್ಯಾನ್, ರಮೇಶ್ ಎಸ್ ಸಿ ಉಪಸ್ಥಿತರಿದ್ದರು.