Share this news

 

 

ಕಾರ್ಕಳ,ಜ.03: ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕುಖ್ಯಾತ ಕಳ್ಳ ಉಮೇಶ @ ಉಮೇಶ ಬಳೆಗಾರ @ ಉಮೇಶ ರೆಡ್ಡಿ ಎಂಬಾತನನ್ನು ಕಾಪು ವೃತ್ತ ನಿರೀಕ್ಷಕ ಅಜಮತ್ ಆಲಿ ಮತ್ತು ಅವರ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.

ಕಳೆದ 26/11/ 2025 ರಿಂದ 05/12/2025 ರ ನಡುವೆ ಕಾಪು ತಾಲೂಕು ಕೋಟೆ ಗ್ರಾಮದ ಕಟಪಾಡಿ ಕಿನ್ನಿಗುಡ್ಡೆ ಪ್ರಭಾಕರ್ ಅಮೀನ್ ಎಂಬವರ ಮನೆಯಲ್ಲಿ ರೂ. 20,000 ಮೌಲ್ಯದ ಚಿನ್ನಾಭರಣ ಹಾಗೂ ರೂ. 17,000 ನಗದು ಹಣ ಕಳ್ಳತನ ಪ್ರಕರಣ ಹಾಗೂ 04/12/2025 ರಂದು ಕಾಪು ತಾಲೂಕು ಮಲ್ಲಾರು ಗ್ರಾಮದ ಕಾಪು ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ರೂ. 3,90,000 ಮೌಲ್ಯದ ಚಿನ್ನಾಭರಣ ಮತ್ತು ರೂ. 1,500 ಮೌಲ್ಯದ ಬೆಳ್ಳಿ ವಸ್ತುಗಳ ಕಳವು ಪ್ರಕರಣಗಳನ್ನು ಬೇಧಿಸಲು ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ದರೋಡೆಕೋರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಪು ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪಿಎಸ್ಐ ಅನಿಲ್ ಕುಮಾರ್ ನಾಯಕ್, ಕಾಪು ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಪಿಎಸ್ಐ ಶುಭಕರ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ಎ ಎಸ್ ಐ ರಾಜೇಶ್ ಪಿ, ಕಾಪು ಪೊಲೀಸ್ ಠಾಣಾ ಪಿ ಸಿ ರಘು ಮತ್ತು ಮೋಹನ್ ಚಂದ್ರ ಹಾಗೂ ಕಾಪು ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಹೆಚ್ ಸಿ ರಿಯಾಜ್, ಪಿ ಸಿ ಜೀವನ್ ಕುಮಾರ್ ರವರ ವಿಶೇಷ ಅಪರಾಧ ಪತ್ತೆ ದಳ ಕಳ್ಳತನ ನಡೆದ ಸ್ಥಳದಲ್ಲಿ ದೊರೆತ ಬೆರಳು ಮುದ್ರೆಯ ಸಹಾಯದಿಂದ ಆರೋಪಿಯ ಬಗ್ಗೆ ಕರ್ನಾಟಕ ರಾಜ್ಯ, ಕೇರಳ ರಾಜ್ಯ, ತಮಿಳುನಾಡು ರಾಜ್ಯ, ಆಂಧ್ರಪ್ರದೇಶ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ದಾಖಲಾದ ಕಳವು ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಅರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ವಿರುದ್ಧ ಕರ್ನಾಟಕದ ಹಲವು ಪೊಲೀಸ್ ಠಾಣೆ ,ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ವಾರಂಟ್ ಜಾರಿಯಲ್ಲಿತ್ತು.

ಉಮೇಶ್ ರೆಡ್ಡಿ ಬಾಲ್ಯದಲ್ಲಿಯೇ ಕಳ್ಳತನ ಮಾಡುತ್ತಿದ್ದು ಮಂಗಳೂರು ನಗರ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ನ್ಯಾಯಾಲಯದಲ್ಲಿ ಬಾಲಾಪರಾಧಿಯಾಗಿ ಶಿಕ್ಷೆ ಅನುಭವಿಸಿದ್ದ.ಇತ್ತೀಚೆಗೆ ಕೇರಳ ರಾಜ್ಯದ ಕಳ್ಳತನ ಪ್ರಕರಣ ಒಂದರಲ್ಲಿ ನ್ಯಾಯಾಲಯದಲ್ಲಿ 2 ವರ್ಷ ಶಿಕ್ಷೆಯಾಗಿ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಇದ್ದು  ಬಿಡುಗಡೆ ಹೊಂದಿದ್ದ.

ಉಡುಪಿ ಜಿಲ್ಲೆಯ ಪೊಲೀಸ್ ಅಧಿಕ್ಷಕರಾದ ಹರಿರಾಮ್ ಶಂಕರ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ಎಸ್ ನಾಯಕ್, ನಿಕಟಪೂರ್ವ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಾಂವದಾ ಮತ್ತು ಪ್ರಭಾರ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಪ್ರಭು ಡಿ ಟಿ, ನೇತೃತ್ವದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಅಜ್ಮತ್ ಆಲಿ ರವರ ಅಪರಾಧ ಪತ್ತೆದಳ ಕಳವು ಪ್ರಕರಣವನ್ನು ಭೇದಿಸಿದ್ದು, ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿ ಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಹಾಗೂ ವೃತ ನಿರೀಕ್ಷಕರ ಜೀಪು ಚಾಲಕರಾದ ಜಗದೀಶ್ ಸಹಕರಿಸಿದ್ದರು.

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *