ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಕಾರ್ಕಳ ಇದರ ಪದಾಧಿಕಾರಿಗಳ ಸಭೆಯು ಹೋಟೆಲ್ ಪ್ರಕಾಶ್ ನಲ್ಲಿ ನಡೆಯಿತು.
2024-25ನೇ ಸಾಲಿನ ತಾಲೂಕಿನ ಸಾಹಿತ್ಯ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. “ಸಾಹಿತ್ಯದ ಖುಷಿ ಸಾವಯವ ಕೃಷಿ” ಎನ್ನುವ ಪರಿಕಲ್ಪನೆಯಲ್ಲಿ “ಸಾಹಿತ್ಯ ಸಂಭ್ರಮ-2024” ವರ್ಷದ ಸರಣಿ ಕಾರ್ಯಕ್ರಮವನ್ನು ನಾಲ್ಕು ವಲಯಗಳಲ್ಲಿ ನಡೆಸಲಾಗುವುದು. ತಾಲೂಕಿನ ಬರಹಗಾರ ಸಮ್ಮೇಳನ ಸೇರಿದಂತೆ ತಾಲೂಕಿನ ವಿವಿಧ ಸರಕಾರಿ ಇಲಾಖೆಗಳಲ್ಲಿ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಈ ವರ್ಷ ಇಪ್ಪತ್ತನೇ ಸಾಹಿತ್ಯ ಸಮ್ಮೇಳನವನ್ನು ಬಹಳ ಅದ್ದೂರಿಯಿಂದ ತಾಲೂಕು ಕೇಂದ್ರದಲ್ಲಿ ಆಯೋಜಿಸಲಾಗುವುದು ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ರಾಜೇಂದ್ರ ಭಟ್ ಕೆ, ಬಿ.ಕೆ.ಈಶ್ವರಮಂಗಲ, ಶಿವಸುಬ್ರಹ್ಮಣ್ಯ ಜಿ ಭಟ್, ನಾಗೇಶ್ ನಲ್ಲೂರು, ದೇವುದಾಸ್ ನಾಯಕ್, ತಿಪ್ಪೇಸ್ವಾಮಿ ಆರ್, ಸುಬ್ರಹ್ಮಣ್ಯ ಉಪಾಧ್ಯ ಬಿ, ಲಕ್ಷ್ಮೀ ಹೆಗಡೆ, ಡಾ. ಸುಮತಿ ಪಿ, ಸುಲೋಚನಾ ಬಿ. ವಿ, ಶೈಲಜಾ ಹೆಗ್ಡೆ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸಭೆಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ದೇವದಾಸ್ ಕೆರೆಮನೆ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿದರು.