ಕಾರ್ಕಳ; ಮದ್ಯವ್ಯಸನಿ ವ್ಯಕ್ತಿಯಯೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ವೇಳೆಗೆ ಮೃತಪಟ್ಟಿರುವ ಘಟನೆ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ. ಕುಕ್ಕುಂದೂರು ನಿವಾಸಿ ದಯಾನಂದ(61ವ) ಮೃತಪಟ್ಟವರು.
ಶುಕ್ರವಾರ ಸಂಜೆ ದಯಾನಂದ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ನೆರೆಮನೆಯ ದಿನೇಶ್ ಅವರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆ ವೇಳೆಗಾಗಲೇ ದಯಾನಂದ ಮೃತಪಟ್ಟಿದ್ದರು.
ಈ ಕರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.