

ಕಾರ್ಕಳ: ಆರೋಗ್ಯ & ಕ್ಷೇಮ ಮಂದಿರ ಕುಕ್ಕುಂದೂರು ಬಿ. ಹಾಗೂ ವಿಜೇತ ವಿಶೇಷ ಶಾಲೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ವಿಜೇತ ವಿಶೇಷ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರ ಬಿಪಿ ಶುಗರ್ ಹಾಗೂ HIV ಮತ್ತು ಇನ್ಫೆಕ್ಷನ್ ಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಿಟ್ಟೆ ಆಪ್ತ ಸಮಲೋಚಕರು ದಿನೇಶ್, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಪ್ರಯೋಗ ಶಾಲಾ ತಜ್ಞರು ಸುದರ್ಶನ್, ನಕ್ರೆ ಹಾಸ್ಪಿಟಲ್ ಸಿ ಹೆಚ್ ಓ ಸ್ವಾತಿ, ಪಿ ಹೆಚ್ ಸಿ ಓ ಅನಿತಾ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಆಶಾ ಕಾರ್ಯಕರ್ತೆ ಸೌಮ್ಯ, ಅಂಬಿಕಾ ಉಪಸ್ಥಿತರಿದ್ದರು.







