ಅಜೆಕಾರು: ಮಹಿಳೆಯೊಬ್ಬರಿಗೆ ಪಾರ್ಟ್ ಟೈಮ್ ಜಾಬ್‌ನ ಆಮಿಷ ತೋರಿಸಿ ಅವರಿಂದ 8 ಲಕ್ಷಕ್ಕೂ ಅಧಿಕ ಹಣವನ್ನು ಪಡೆದು ವಂಚಿಸಿರುವ ಪ್ರಕರಣ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಜೆಕಾರು ಮರ್ಣೆ ಗ್ರಾಮದ ಸುಷ್ಮಾ ಮೋಸಹೋದ ಮಹಿಳೆ. ಸುಷ್ಮಾ ಅವರ ಮೊಬೈಲ್ ನಂಬರಿನ ಟೆಲಿಗ್ರಾಂ ಖಾತೆಗೆ ಜೂನ್ 10 ರಂದು Vanya ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಮೆಸೇಜ್ ಬಂದಿದ್ದು, ಅವರು ಜಾಬ್ ಮಾಡಲು ಒಪ್ಪಿಕೊಂಡಿದ್ದರು. ಬಳಿಕ ಸ್ವಲ್ಪ ಸಮಯದ ನಂತರ Vanya ಹಾಗೂ Mentor Kuldeepಎಂಬವರ ಟೆಲಿಗ್ರಾಂ ಖಾತೆಯಿಂದ ಅವರು ಕಳುಹಿಸುವ ವಿವಿಧ ಹೊಟೇಲ್ ಗಳ ಸ್ಕ್ರೀನ್ ಶಾಟ್ ಗಳನ್ನು ತೆಗೆದು ಕಳುಹಿಸುವ ಟಾಸ್ಕ್ ನೀಡಿದ್ದು ಹಾಗೂ ಪ್ರತೀ 3 ಟಾಸ್ಕ್ ಮುಗಿದ ನಂತರ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದರು.
ಸುಷ್ಮಾ ಅವರು ಟಾಸ್ಕ್ ಗಳನ್ನು ಮುಕ್ತಾಯಗೊಳಿಸಿದ ನಂತರ ಅವರ ಆನ್ ಲೈನ್ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡಲು Error ಬಂದಿರುವುದರಿAದ ಖಾತೆಯಲ್ಲಿರುವ ಹಣದ 30% ಹಣವನ್ನು ಜಮೆ ಮಾಡಿದಲ್ಲಿ ಹಣವನ್ನು ನಿಮಗೆ ಬಿಡುಗಡೆ ಮಾಡುವುದಾಗಿ ತಿಳಿಸಿ ಆರೋಪಿಗಳು ಸುಷ್ಮಾರಿಂದ ವಿವಿಧ ಖಾತೆಗಳಿಗೆ ರೂ. 8,53,225 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದರು.ಆದರೆ ಆ ಬಳಿಕ ಇದುವರೆಗೆ ಯಾವುದೇ ಹಣವನ್ನು ವಾಪಾಸು ನೀಡದೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಸುಷ್ಮಾ ಅಜೆಕಾರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.