
ಕಾರ್ಕಳ, ಜ.8:ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದ ಕಳ್ಳರು ಬೆಳ್ಳಿಯ ಪೂಜಾ ಸಾಮಾಗ್ರಿಗಳು ಹಾಗೂ ಚಿನ್ನಾಭರಣವನ್ನು ಕಳವುಗೈದಿರುವ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆ ಪರಪು ಎಂಬಲ್ಲಿ ಜ.7 ರಂದು ನಡೆದಿದೆ.
ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಶ್ರೀನಿವಾಸ ನಾರಾಯಣ ಮೂಲ್ಯ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳರು ಕಪಾಟಿನಲ್ಲಿರಿಸಿದ್ದ ಬೆಳ್ಳಿಯ ಸಣ್ಣ ದೀಪ -2, ಬೆಳ್ಳಿಯ ದೊಡ್ಡ ದೀಪ -2, ಬೆಳ್ಳಿಯ ಚೆಂಬು -1 , ಬೆಳ್ಳಿಯ ತಟ್ಟೆ – 1 ಹಾಗೂ 3 ಗ್ರಾಂ ತೂಕದ ಒಂದು ಚಿನ್ನದ ಒಡ್ಡುಂಗುರವನ್ನು ಕಳವುಗೈದಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
