

ಕಾರ್ಕಳ, ಸೆ. 03:ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯು ಮಂಗಳೂರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಅಡಿಕೆ ,ತೆಂಗು, ಗೇರು, ಕಾಳು ಮೆಣಸು ಇನ್ನಿತರ ತೋಟಗಾರಿಕಾ ಬೆಳೆಗಳು, ಭತ್ತದ ಕೃಷಿಕರ ಸಮಸ್ಯೆ ನಿವಾರಣೆ, ಗೇರು ಬೀಜ ಸಂಸ್ಕರಣಾ ಘಟಕಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಇನ್ನಿತರ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರಗಳು ಪ್ರಕಟವಾಗಬೇಕು ಎಂದು ಸಾಣೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.
ಸ್ಥಳೀಯ ಜನರಿಗೆ ವಿಪುಲ ಉದ್ಯೋಗಾವಕಾಶ ಒದಗಿಸುವ
ಜವಳಿ ಉದ್ಯಮ, ಕರಾವಳಿ ಮೂಲದ ವಿದೇಶದಲ್ಲಿರುವ ಉದ್ಯಮಿಗಳನ್ನು ಕರಾವಳಿ ಭಾಗದಲ್ಲಿ ಉದ್ಯಮ ಸ್ಥಾಪಿಸುವಂತೆ ಉತ್ತೇಜನ ನೀಡಬೇಕು.ಬಾಕಿ ಉಳಿದಿರುವ ಹೆದ್ದಾರಿ ,ರೈಲ್ವೆ ,ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಜೊತೆಗೆ ಸಮನ್ವಯ ಸಾಧಿಸಿ ಶೀಘ್ರ ಅನುಷ್ಠಾನಗೊಳಿಸಬೇಕು.
ಮೀನುಗಾರರಿಗೆ ಆಧುನಿಕ ಬಂದರು, ಶೀತಲ ಘಟಕ, ಮೀನು ಸಂಸ್ಕರಣಾ ಕೈಗಾರಿಕೆ ಹಾಗೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು.
ಮಂಗಳೂರು ಮತ್ತು ಮಲ್ಪೆ ಬಂದರುಗಳ ವಿಸ್ತರಣೆ, ಕರಾವಳಿ ಪ್ರವಾಸೋದ್ಯಮ, ಬೀಚ್ ಅಭಿವೃದ್ಧಿ, ಸಿಆರ್‌ಝಡ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಬೆಂಗಳೂರು _ಮಂಗಳೂರು–ಮುಂಬೈ ರೈಲು ವೇಗವರ್ಧನೆ, ಕರಾವಳಿ ಹೆದ್ದಾರಿ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಉಡುಪಿ–ದಕ್ಷಿಣ ಕನ್ನಡದಲ್ಲಿ ವೈದ್ಯಕೀಯ, ಶಿಕ್ಷಣ, ಕೌಶಲ್ಯ ಮತ್ತು ಐಟಿ ಹಬ್‌ಗಳನ್ನು ಬೆಳೆಸಬೇಕು.ಕೃಷಿ ಮತ್ತುಹೈನುಗಾರಿಕಾ ಅಭಿವೃದ್ಧಿಗೆ ಉಡುಪಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ,ಉಡುಪಿ ಜಿಲ್ಲೆ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ರಚಿಸಬೇಕು ಎಂದು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
