Share this news

ಕಾರ್ಕಳ ಆ 21: ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಟೋಲ್ ಸ್ಥಾಪನೆಗೆ ಎಲ್ಲಾ ಸಿದ್ಧತೆ ನಡೆಸಿದೆ. ರಸ್ತೆ ನಿರ್ಮಾಣವಾಗಿ ಬರೋಬ್ಬರಿ 12 ವರ್ಷಗಳ ನಂತರ ಮತ್ತೆ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿ ಬಯಲಾಗಿದೆ. ಸದಾ ಜನರ ಉದ್ಧಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಅಧಿಕಾರ ಸಿಕ್ಕಾಗ ಮಾಡುವುದೇ ಬೇರೆ. ಆಡುವುದು ಒಂದಾದರೆ ಮಾಡುವುದು ಇನ್ನೊಂದು ಎಂಬ ಗಾದೆ ಮಾತು ಕಾಂಗ್ರೆಸ್ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಒಂದು ಕಡೆ ತಮ್ಮದೇ ಕಾಂಗ್ರೆಸ್ ಸರ್ಕಾರ ಟೋಲ್ ಸಂಗ್ರಹಕ್ಕೆ ಕಾರ್ಯಾದೇಶ ಮಾಡಿದ್ದರೆ ಇನ್ನೊಂದು ಕಡೆ ಸ್ಥಳೀಯ ಕಾಂಗ್ರೆಸ್ ನಾಯಕರು ಟೋಲ್ ಸಂಗ್ರಹ ಮಾಡದಂತೆ ಪ್ರತಿಭಟನೆಗೆ ಇಳಿದಿರುವುದು ನಾಚಿಕೆಗೇಡಿತನ. ಇವರು ಮಾಡುವ ಪ್ರತಿಭಟನೆ ಯಾರ ವಿರುದ್ಧ? ಆಡಳಿತದಲ್ಲಿರುವ ತಮ್ಮದೇ ಪಕ್ಷದ ವಿರುದ್ಧವೋ ಎಂಬುವುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.
ಆಡಳಿತ ನಡೆಸುವವರೇ ತಮ್ಮದೇ ಸರ್ಕಾರದ ಪ್ರತಿಭಟನೆಗೆ ಇಳಿದರೆ ಇನ್ನು ಜನಸಾಮಾನ್ಯರ ಪಾಡೇನು? ಇವರ ಪ್ರತಿಭಟನೆ ಬಗ್ಗೆ ಜನರ ಮುಂದೆ ಹಲವಾರು ಸಂಶಯಗಳಿದ್ದು, ಅದಕ್ಕೆ ಸ್ಥಳೀಯ ಕಾಂಗ್ರೆಸ್ಸಿಗರು ಉತ್ತರ ನೀಡಬೇಕಾಗುತ್ತದೆ.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದರೂ ಸ್ಥಳೀಯ ನಾಯಕರು ಟೋಲ್ ಸಂಗ್ರಹವನ್ನು ನಿಲ್ಲಿಸುವಷ್ಟು ಶಕ್ತರಿಲ್ಲವೇ? ಸ್ಥಳೀಯ ನಾಯಕರ ಮಾತನ್ನು ಅವರದೇ ಪಕ್ಷದ ಸಚಿವರು ಕೇಳುತ್ತಿಲ್ಲವೇ? ನಿಮ್ಮ ಮಾತಿಗೆ ಬೆಲೆ ಇಲ್ಲವೇ? ಅಥವಾ ಜನರ ದಿಕ್ಕು ತಪ್ಪಿಸುವದಕ್ಕೋಸ್ಕರ ಈ ಪ್ರತಿಭಟನೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ಸ್ಥಳೀಯ ಕಾಂಗ್ರೆಸಿಗರು ಉತ್ತರಿಸಿ ಆಮೇಲೆ ಪ್ರತಿಭಟನೆ ಮಾಡಲಿ ಎಂದು ಬೆಳ್ಮಣ್ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರ ಶೆಟ್ಟಿ ಆಗ್ರಹಿಸಿದ್ದಾರೆ

                        

                          

                        

                          

 

`

Leave a Reply

Your email address will not be published. Required fields are marked *