
ಮೈಸೂರು, ಅ, 29: ಮುಂದಿನ ನವೆಂಬರ್ ನಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿದ್ದು, ಈ ನಡುವೆ ಸಿಎಂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ಬೆಂಬಲಿಗರ ನಡುವೆ ಮಾತಿನ ಸಮರ ತಾರಕಕ್ಕೇರಿದೆ. ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆ ಕುರಿತಾಗಿ ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಸಿಎಂ ಎಂದು ಘೋಷಿಸಿ ಎಂದು ಪತ್ರ ಚಳುವಳಿ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಗೆ ಪತ್ರ ಬರೆದು ಚಳುವಳಿ ಆರಂಭಿಸಿದ್ದಾರೆ.
ಮೈಸೂರಿನಲ್ಲಿ ರಾಮಸ್ವಾಮಿ ವೃತ್ತದಲ್ಲಿ ಸಿದ್ದು ಬೆಂಬಲಿಗರು ಪತ್ರ ಚಳುವಳಿ ಆರಂಭಿಸಿದ್ದು ಸಿಎಂ ಬದಲಾವಣೆ ಕುರಿತ ಗೊಂದಲಗಳಿಗೆ ತೆರೆ ಎಳೆಯುವಂತೆ ಒತ್ತಾಯಿಸಿ ಪತ್ರ ಚಳುವಳಿ ನಡೆಸಿ ಒತ್ತಾಯಿಸಿದರು. ಯಾರು ಸಿಎಂ ಆಗ್ತಾರೆ ಸಿಎಂ ರೇಸ್ ನಲ್ಲಿ ಯಾರು ಇದ್ದಾರೆ ಎಂದು ಗೊಂದಲಗಳಿದ್ದು, ಮುಂದಿನ ಎರಡೂವರೆ ವರ್ಷ ಅವಧಿಗೂ ಸಿದ್ದರಾಮಯ್ಯರನ್ನೇ ಸಿಎಂ ಎಂದು ಘೋಷಿಸಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವಂತೆ ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.





