ಕಾರ್ಕಳ: ಅಬಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿದ ಕಾರ್ಕಳ ಅನಂತಶಯನ ರಸ್ತೆಯ ಕಿಂಗ್ಸ್ ಬಾರ್ ನ ಹೊರಗಡೆ ಯಾವುದೇ ಪರವಾನಗಿಯಿಲ್ಲದೇ ಮದ್ಯ ಬಾಟಲಿಗಳನ್ನು ಶೇಖರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಕಾರ್ಕಳ ನಗರ ಠಾಣೆಯ ಎಸ್‌ಐ ಶಿವಕುಮಾರ್ ಎಸ್,ಆರ್ ನೇತೃತ್ವದ ಪೊಲೀಸರ ತಂಡ ಶುಕ್ರವಾರ ಕಿಂಗ್ಸ್ ಬಾರ್ ಮೇಲೆ ದಾಳಿ ನಡೆಸಿ ಸುಮಾರು 4600 ಮಾಲ್ಯದ ಮದ್ಯದ ಬಾಟಲಿ ಹಾಗೂ ಸ್ಯಾಚೇಚ್ ಗಳನ್ನು ವಶಪಡಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ರಾಮ್ ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಕಾರ್ಕಳದ ಬಸ್ ನಿಲ್ದಾಣದಲ್ಲಿರುವ ಬಂಜಾರ ವೈನ್ಸ್ ಶಾಪ್ ನಲ್ಲಿ ಬೆಳಗ್ಗೆ 6 ಗಂಟೆಯಿAದಲೇ ಮದ್ಯ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ಕಾರ್ಕಳ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಮದ್ಯ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಅಬಕಾರಿ ನಿಯಮಾವಳಿ ಪ್ರಕಾರ ಬೆಳಗ್ಗೆ 9 ಗಂಟೆಯ ಮೊದಲು ಮದ್ಯ ಮಾರಾಟ ಮಾಡುವಂತಿಲ್ಲ ಆದರೆ ಬಂಜಾರ ವೈನ್ಸ್ ಶಾಪ್ ಮಾಲೀಕ ಸದಾಶಿವ ಮುಂಜಾನೆ 6 ಗಂಟೆಗೂ ಮೊದಲೇ ಮದ್ಯದಂಗಡಿ ತೆರೆದು ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದ, ಈ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿ ಒಟ್ಟು 16,430 ಊ ಮೌಲ್ಯದ ಮದ್ಯದ ಬಾಟಲಿಗಳು ಹಾಗೂ 2140 ನಗದು ವಶಪಡಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ಬಾರ್‌ನ ಮ್ಯಾನೇಜರ್ ಸುನಿಲ್ ಮತ್ತು ವಿನೀತ್ ಇವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.