ಕಾರ್ಕಳ: ತೆಳ್ಳಾರಿನ ಮುಸ್ಲಿಂ ಸಮುದಾಯದ ಜಹೀರ್ ಎಂಬವರ ಮನೆಯಲ್ಲಿ ದುರ್ಗಾದೇವಿ ಆರಾಧನೆ ನಡೆಯುತ್ತಿದ್ದು,ಅಲ್ಲಿಗೆ ಪೂಜೆಗೆ ಬಂದಿದ್ದ ಸಂದರ್ಭದಲ್ಲಿ ಅನ್ಯಕೋಮಿನ ವ್ಯಕ್ತಿ ತಂಡ ಕಟ್ಟಿಕೊಂಡು ತನ್ನ ಹಲ್ಲೆ ನಡೆಸಿದ್ದಾನೆ ಎಂದು ನಿಟ್ಟೆಯ ವಿಶ್ವನಾಥ ಎಂಬವರು ನೀಡಿದ ದೂರಿನ ಕುರಿತು ರಿಯಾಜ್ ಎಂಬಾತ ಪ್ರತಿದೂರು ನೀಡಿದ್ದಾನೆ.
ದುರ್ಗಾ ಗ್ರಾಮದ ಪಲ್ಕೆ ರಸ್ತೆಯಲ್ಲಿ ತನ್ನ ಮಕ್ಕಳ ಜತೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ 20 ಜನರ ತಂಡವು ತನ್ನ ಹಾಗೂ ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ.
ರಿಯಾಜ್ ನೀಡಿದ ದೂರಿನಂತೆ ಅವರು ತಮ್ಮ ಮಗ ಪೌಜನ್ ಈತನನ್ನು ಕರೆದುಕೊಂಡು ವಾಕಿಂಗ್ ಮಾಡಿಸುವಾಗ, ತಮ್ಮ ಜಹೀರ್ ಬುಲೆಟ್‌ನಲ್ಲಿ ಬಂದು, ರಿಯಾಜ್ ಮತ್ತು ಅವರ ಮಗನನ್ನು ತಡೆದು ನಿಲ್ಲಿಸಿ ನೀನು ಕಣ್ಣು ಕಾಣದ ನಿನ್ನ ಮಗನನ್ನು ರೋಡ್‌ನಲ್ಲಿ ಯಾಕೆ ಬಿಟ್ಟಿದ್ದಿ, ಎಂದು ಬೈಯ್ದು, ದೂಡಿ, ಕೈಯಿಂದ ಹೊಡೆದಿದ್ದಾರೆ. ಈ ಸಂದರ್ಭ ಗಲಾಟೆ ಆದ ಸ್ಥಳಕ್ಕೆ ನಜೀರ್, ಇಮ್ತಿಯಾಜ್, ಹನೀಫ್, ವಿಶ್ವನಾಥ ಇರ್ಷಾದ್ ಹಾಗೂ ಇತರ ಸುಮಾರು 20 ಜನರು ರಿಕ್ಷಾ ಮತ್ತು ಕಾರಿನಲ್ಲಿ ಬಂದು, ರಿಕ್ಷಾದ ಲಿವರ್ ಜಾಕನ್ನು ತಂದು ಹೆದರಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿ ರಿಯಾಜ್‌ನ ಕಾಂಪೌಂಡ್ ಹಾಕಿದ್ದ ಅಸ್ತ್ರ ನ್ಯೂಸ್ ಎಂಬ ಜಾಹೀರಾತು ಫಲಕವನ್ನು ಧ್ವಂಸ ಮಾಡಿ ರಿಯಾಜ್ ಹಾಗೂ ಆತನ ಮಕ್ಕಳಾದ ರಿಹಾನ್, ರಿಮಾನ್, ರಿಫಾನ್ ಮತ್ತು ಪೌಜನ್ ರಿಗೆ ಜಹೀರ್, ನಜೀರ್, ಇರ್ಷಾದ್ , ಇಮ್ತಿಯಾಜ್ ಹನೀಫ್ ಹಾಗೂ ಇತರರು ಮರದ ಕೋಲಿನಿಂದ ಹಾಗೂ ಕಲ್ಲಿನಿಂದ ಹೊಡೆದು, ಬಳಿಕ ಮನೆಯ ಗೇಟ್ ಹತ್ತಿರ ನಿಂತುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.