ಕುಂದಾಪುರ : ಸುಡುಮಣ್ಣಿಗೆ ಹಾಕಿದ್ದ ಬೆಂಕಿ ಬಯಲಿನ ಒಣಹುಲ್ಲಿಗೆ ಹೊತ್ತಿಕೊಂಡ ಕಾರಣದಿಂದ ಕೃಷಿಕರೊಬ್ಬರು ಬೆಂಕಿ ನಂದಿಸಲು ಹೋಗಿ ಹೊಗೆ ಆವರಿಸಿ ಉಸಿರುಗಟ್ಟಿ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಶಾಂತಾವರ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ
ಕಾಳಾವರ ನಿವಾಸಿ ಪ್ರಗತಿಪರ ಕೃಷಿಕ ಮಹಾಲಿಂಗ ದೇವಾಡಿಗ (80)ಮೃತಪಟ್ಟ ದುರ್ದೈವಿ ಇವರು ಕೃಷಿ ಉದ್ದೇಶಕ್ಕಾಗಿ ತಮ್ಮ ಗದ್ದೆಯಲ್ಲಿ ಮಗಳು ಬೇಬಿಯೊಂದಿಗೆ ಕೃಷಿ ತ್ಯಾಜ್ಯ(ಸುಡುಮಣ್ಣು)ಕ್ಕೆ ಬೆಂಕಿ ಹಾಕಿದ್ದರು. ಈ ವೇಳೆ ಬೆಂಕಿಯ ಕೆನ್ನಾಲಗೆ ಸುತ್ತಲೂ ಆವರಿಸಿದ್ದು, ಬಯಲಿನ ಒಣಹುಲ್ಲಿಗೆ ಹಾಗೂ ಸಮೀಪದ ನಾಗಬನಕ್ಕೂ ಬೆಂಕಿ ಹಬ್ಬುತ್ತಿತ್ತೆನ್ನಲಾಗಿದೆ. ಮಹಾಲಿಂಗ ದೇವಾಡಿಗ ಬೆಂಕಿಯ ಮಧ್ಯೆ ಸಿಲುಕಿ ಉಸಿರುಗಟ್ಟಿ ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕದಳ ದವರಿಗೆ ಮಾಹಿತಿ ನೀಡಿದರೂ ಅಗ್ನಿಶಾಮಕದಳದ ವಾಹನ ಸ್ಥಳಕ್ಕೆ ಬರಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಕಾರ್ಯಾಚರಣೆಗೆ ತೊಡಕಾಗಿತ್ತು. ಇದರಿಂದ ರೈತ ಸಜೀವ ದಹನವಾಗಿದ್ದಾರೆ.
ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕದಳದವರು ತೆರಳಿ ಪರಿಶೀಲನೆ ನಡೆಸಿದ್ದಾರೆ.