ಕಾರ್ಕಳ: ಭಾರತೀಯ ಜನತಾ ಪಕ್ಷದ ಸುರಕ್ಷಿತ ವಿಕಸಿತ ಭಾರತವೆಂಬ ಕಾರ್ಯಸೂಚಿ ಹಾಗೂ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಧ್ಯೇಯ ವಾಕ್ಯದೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ.
ಇದರ ಅಂಗವಾಗಿ ಬಿಜೆಪಿ ಕಾರ್ಕಳ ಮಂಡಲ ವತಿಯಿಂದ ಶನಿವಾರ ಅನಂತಶಯನ ವೃತ್ತದಿಂದ ವೆಂಕಟರಮಣ ದೇವಸ್ಥಾನದವರೆಗೆ ವಿಕಸಿತ ಭಾರತಕ್ಕಾಗಿ ನಮ್ಮ ಹೆಜ್ಜೆ ಎಂಬ ಕಾರ್ಯಕ್ರಮದ ಅಡಿ ಕಾಲ್ನಡಿಗೆ ಜಾಥಾ ನಡೆಯಿತು.
ಕಾರ್ಕಳ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾ ಮೂಲಕ ಕೋಟ ಶ್ರೀನಿವಾಸ ಪುಜಾರಿ ಪರವಾಗಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್, ಮಣಿರಾಜ ಶೆಟ್ಟಿ,ಎಂ.ಕೆ ವಿಜಯ ಕುಮಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಮಹಾವೀರ ಹೆಗ್ಡೆ,ಬೋಳ ಜಯರಾಮ ಸಾಲ್ಯಾನ್, ರೇಶ್ಮಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು